ಚಾಕಲೇಟ್ ಮಂಚೂರಿಯನ್ ಎಂದಾದರೂ ತಯಾರಿಸಿದ್ದೀರಾ…? 05-12-2020 5:39AM IST / No Comments / Posted In: Latest News, International, Special ವಿದೇಶಿ ಅಡುಗೆಗಳಿಗೆ ದೇಶಿ ಸ್ಪರ್ಶ ಕೊಡೋಕೆ ಭಾರತೀಯರಿಗೆ ಹೇಳಿಕೊಡಬೇಕು ಎಂದೇನಿಲ್ಲ. ಕೆಲ ದಿನಗಳ ಹಿಂದಷ್ಟೇ ಬಿಯರ್ ಹಾಗೂ ಮ್ಯಾಗಿ ಕಾಂಬಿನೇಷನ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಟ್ಟಿತ್ತು. ಇದೀಗ ಚಾಕಲೇಟ್ ಮಂಚೂರಿಯನ್ ಸರದಿ. ಚೆಂಡಿನ ಆಕಾರದಲ್ಲಿರುವ ಫೆರೆರೊ ರೋಚರ್ ಚಾಕಲೇಟ್ನ್ನ ಸವಿದಿರ್ತಿರಾ. ಆದರೆ ಈ ಚಾಕಲೇಟ್ನ್ನ ಮಂಚೂರಿಯನ್ ಮಸಾಲಾ ಹಾಕಿ ಚಾಕಲೇಟ್ ಮಂಚೂರಿ ತಯಾರಿಸಿದ್ರೆ ಅದರ ರುಚಿ ಹೇಗಿರಬಹುದು ಎಂದು ಊಹಿಸಿಕೊಳ್ಳೋಕು ಅಸಾಧ್ಯ, ಆದರೆ ಟ್ವೀಟಿಗರೊಬ್ಬರು ಈ ಖಾದ್ಯವನ್ನ ತಯಾರಿಸಿದ್ದು ಟ್ವಿಟರ್ನಲ್ಲಿ ಫೋಟೋವನ್ನ ಹರಿಬಿಟ್ಟಿದ್ದಾರೆ. Here to annoy you with a photo of the nicest thing I've found online. Enjoy! pic.twitter.com/3FMESZVtfN — Joanna (@thatdoggonelady) December 3, 2020