ಲಂಡನ್: ಯುವಕನೊಬ್ಬ ಹೊಂಡದಲ್ಲಿ ಕುಳಿತು ರಸ್ತೆಯ ಪಕ್ಕದ ಅಪಾಯಕಾರಿ ಹೊಂಡ ಮುಚ್ಚದ ನಗರ ಆಡಳಿತದ ವಿರುದ್ಧ ಪ್ರತಿಭಟಿಸಿದ ಘಟನೆ ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದಿದೆ.
ಪೆಂಡ್ಲೆ ಸಮೀಪದ ವೈ ಕಾಲರ್ ಎಂಬ ನಗರದ ಕಂಟ್ರಿ ರಸ್ತೆಯ ಹೊಂಡ ಮುಚ್ಚದ ಬಗ್ಗೆ ಅಲ್ಲಿನ ನಾಗರಿಕ ಅರೊನ್ ಕ್ರಾಸ್ ಎಂಬ 52 ವರ್ಷದ ವ್ಯಕ್ತಿ ಪ್ರತಿಭಟಿಸಿದ್ದಾರೆ. ತನ್ನ 6 ಅಡಿ ಉದ್ದದ ಮಗನನ್ನು ಹೊಂಡದಲ್ಲಿ ಇಳಿಸಿ ಫೋಟೋ ತೆಗೆಸಿ, ಜಾಲತಾಣದಲ್ಲಿ ಹರಿಬಿಟ್ಟು ಆಡಳಿತ ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
“ಸಣ್ಣ ಮಕ್ಕಳು ಬಿದ್ದು ಸಾಯುವಷ್ಟು ದೊಡ್ಡ ಹೊಂಡ ಇಲ್ಲಿದೆ. ನನ್ನ ಪಾರ್ಟ್ನರ್ ಕಾರು ಇಲ್ಲಿ ಸಿಕ್ಕಿಹಾಕಿಕೊಂಡಿತ್ತು. ವರ್ಷದ ಹಿಂದೆ ಈ ಸಂಬಂಧ ನಗರ ಆಡಳಿತಕ್ಕೆ ದೂರು ನೀಡಿದ್ದೆ. ಸ್ಪಂದನೆ ದೊರೆತಿಲ್ಲ” ಎಂದು ಅರೊನ್ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, “ಇದು ನಮ್ಮ ವ್ಯಾಪ್ತಿಗೆ ಸೇರಿದ್ದಲ್ಲ. ಹಳ್ಳಿ ಹೈವೆ ಗಡಿಯಲ್ಲಿದೆ” ಎಂದು ನಗರಾಡಳಿತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.