alex Certify ಪಿರಾಮಿಡ್​ ಎದುರು ಫೋಟೋಶೂಟ್​ ಮಾಡಿದ ಮಾಡೆಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿರಾಮಿಡ್​ ಎದುರು ಫೋಟೋಶೂಟ್​ ಮಾಡಿದ ಮಾಡೆಲ್…!

ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಜೋಜರ್ನ್​ ಪಿರಾಮಿಡ್​​ನಲ್ಲಿ ಸೂಕ್ತವಲ್ಲದ ಫೋಟೋಶೂಟ್​ ಮಾಡಿದ್ದಾರೆ ಎಂದು ಆರೋಪಿಸಿ ಮಾಡೆಲ್​ ಹಾಗೂ ಫೋಟೋಗ್ರಾಫರ್​ರನ್ನ ವಶಪಡಿಸಿಕೊಂಡ ಈಜಿಪ್ಟ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದ ಮಂದಿ ಕೋಪಗೊಂಡಿದೆ.

ಮಾಡೆಲ್​ ಹಾಗೂ ಫೋಟೋಗ್ರಾಫರ್​ರನ್ನ ಅಧಿಕಾರಿಗಳು ಬಿಡುಗಡೆ ಮಾಡಿದ್ದರೂ ಸಹ ನೆಟ್ಟಿಗರ ಕೋಪ ಆರಿದಂತೆ ಕಾಣುತ್ತಿಲ್ಲ.

ಕೈರೋದಿಂದ ದಕ್ಷಿಣಕ್ಕೆ 30 ಕಿಲೋಮೀಟರ್​ ದೂರದಲ್ಲಿರುವ ಸಕ್ಕರಾ ನೆಕ್ರೋಪೊಲಿಸ್​​ನಲ್ಲಿ ನಡೆದ ಶೂಟಿಂಗ್​​ನಲ್ಲಿ ಮಾಡೆಲ್​ ಸಲ್ಮಾ ಅಲ್​ಶಿಮಿ ಈಜಿಪ್ಟ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಈ ಫೋಟೋ ಈಜಿಪ್ಟ್ ಸ್ಮಾರಕದ ಘನತೆಗೆ ಭಂಗ ತಂದಿದೆ ಎಂದು ಆರೋಪಿಸಿದ ಈಜಿಪ್ಟ್ ಅಧಿಕಾರಿಗಳು ಸೋಮವಾರ ಮಾಡೆಲ್​ ಹಾಗೂ ಫೋಟೋಗ್ರಾಫರ್​ನ್ನು ವಶಕ್ಕೆ ಪಡೆದಿದ್ದರು.

ಶಿಮಿ ಬಂಧನದ ಕುರಿತಾದ ವರದಿಗಳು ಎಲ್ಲೆಡೆ ಹರಿದಾಡಿದೆ. ಶಿಮಿ ಆಂಟಿಕ್ವಿಟೀಸ್​​ ಸಚಿವಾಲಯದ ನಿಯಮ ಉಲ್ಲಂಘಿಸಿದ್ದಾರೆ ಎಂದು ವರದಿಗಳು ಹೇಳಿದ್ದವು. ಮಂಗಳವಾರ ತಲಾ 500 ಈಜಿಪ್ಟ್ ಪೌಂಡ್​ ಮೌಲ್ಯದ ಜಾಮೀನಿನಡಿಯಲ್ಲಿ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ. ಆದರೆ ನೆಟ್ಟಿಗರು ಈಜಿಪ್ಟ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ಪಿರಾಮಿಡ್​ ದೇವಾಲಯವೇನಲ್ಲ, ಅಥವಾ ಪುರಾತನ ವಸ್ತುಗಳಿಗೆ ಹಾನಿ ಮಾಡದೇ ಫೋಟೋ ತೆಗೆದುಕೊಂಡಿದ್ರೆ ಅದರಲ್ಲಿ ತಪ್ಪೇನಿದೆ ಎಂದು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...