alex Certify ನೌಕರನಿಗೆ ನಾಣ್ಯದ ರೂಪದಲ್ಲಿ ಸಿಕ್ತು ವೇತನ..! ರೊಚ್ಚಿಗೆದ್ದ ಉದ್ಯೋಗಿಯಿಂದ ನ್ಯಾಯಕ್ಕೆ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರನಿಗೆ ನಾಣ್ಯದ ರೂಪದಲ್ಲಿ ಸಿಕ್ತು ವೇತನ..! ರೊಚ್ಚಿಗೆದ್ದ ಉದ್ಯೋಗಿಯಿಂದ ನ್ಯಾಯಕ್ಕೆ ಮೊರೆ

Philippines Factory Owner Lands in Trouble After Paying Worker in Coins

ಫಿಲಿಪೈನ್ಸ್: ಕಂಪನಿಯಲ್ಲೋ ಅಥವಾ ಕಾರ್ಖಾನೆಯಲ್ಲೋ ಕೆಲಸ ಮಾಡುವ ನೌಕರರಿಗೆ ಸಂಬಳವನ್ನು ನಗದಿನ ರೂಪದಲ್ಲಿ, ಚೆಕ್ ಮುಖಾಂತರ ಅಥವಾ ನಿಗದಿತ ಬ್ಯಾಂಕ್ ಗೆ ಪಾವತಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ವೇತನವನ್ನು ನಾಣ್ಯದ ಮುಖಾಂತರ ಕೊಡಲಾಗಿದೆ.

ಹೌದು, ಈ ಘಟನೆ ನಡೆದಿರುವುದು ಫಿಲಿಪೈನ್ಸ್ ನಲ್ಲಿ. ರಸೆಲ್ ಮಾನೊಸಾ ಎಂಬಾತ ವೇಲೆನ್ಜುವೆಲಾ ನಗರದ ನೆಕ್ಸ್ ಗ್ರೀನ್ ಎಂಟರ್ ಪ್ರೈಸ್ ನಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಕಂಪನಿಯು ತಿಂಗಳ ವೇತನವನ್ನು ನಾಣ್ಯಗಳಲ್ಲಿ ನೀಡಲಾಗಿದೆ. ಅಲ್ಲದೆ ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳುವಂತೆ ಕೇಳಲಾಗಿದೆ.

ಇನ್ನು ಕಂಪನಿಯ ಈ ನಡವಳಿಕೆಯಿಂದ ಆಕ್ರೋಶಗೊಂಡ ರಸ್ಸೆಲ್ ಸಂಬಂಧಿಯು ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಗಳ ಸಹಾಯ ಕೋರಿದ್ದಾರೆ. ಅಲ್ಲದೆ ವೇತನವಾಗಿ ಕೊಟ್ಟಂತಹ ನಾಣ್ಯಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರ್ಖಾನೆಯಲ್ಲಿನ ಕಾರ್ಮಿಕ ಪದ್ಧತಿಗಳ ಅನ್ಯಾಯದ ವಿರುದ್ಧ ದೂರಿದ್ದಕ್ಕೆ ಕಂಪನಿ ಈ ರೀತಿ ಮಾಡಿದೆ ಎಂದು ರಸ್ಸೆಲ್ ಕಿಡಿಕಾರಿದ್ದಾರೆ. ಅಲ್ಲದೆ ಈ ಘಟನೆ ಬಳಿಕ ರಸ್ಸೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಗರದ ಮೇಯರ್ ಸಮಸ್ಯೆ ಆಲಿಸಿದ್ರು. ನೌಕರ ಹಾಗೂ ಕಾರ್ಖಾನೆ ಮಾಲೀಕ ಜಾಸ್ಪರ್ ಚೆಂಗ್ ಸೋ ಅವರ ನಡುವೆ ನಡೆದ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯನ್ನು ವೇಲೆನ್ಜುವೆಲಾ ನಗರದ ಫೇಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರ ಮಾಡಲಾಯಿತು.

Mayor REX Gatchalian met with the representative of Next Green Factory and the employee who received his salary of two…

Posted by Valenzuela City on Monday, June 28, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...