ಫಿಲಿಪೈನ್ಸ್: ಕಂಪನಿಯಲ್ಲೋ ಅಥವಾ ಕಾರ್ಖಾನೆಯಲ್ಲೋ ಕೆಲಸ ಮಾಡುವ ನೌಕರರಿಗೆ ಸಂಬಳವನ್ನು ನಗದಿನ ರೂಪದಲ್ಲಿ, ಚೆಕ್ ಮುಖಾಂತರ ಅಥವಾ ನಿಗದಿತ ಬ್ಯಾಂಕ್ ಗೆ ಪಾವತಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ವೇತನವನ್ನು ನಾಣ್ಯದ ಮುಖಾಂತರ ಕೊಡಲಾಗಿದೆ.
ಹೌದು, ಈ ಘಟನೆ ನಡೆದಿರುವುದು ಫಿಲಿಪೈನ್ಸ್ ನಲ್ಲಿ. ರಸೆಲ್ ಮಾನೊಸಾ ಎಂಬಾತ ವೇಲೆನ್ಜುವೆಲಾ ನಗರದ ನೆಕ್ಸ್ ಗ್ರೀನ್ ಎಂಟರ್ ಪ್ರೈಸ್ ನಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಕಂಪನಿಯು ತಿಂಗಳ ವೇತನವನ್ನು ನಾಣ್ಯಗಳಲ್ಲಿ ನೀಡಲಾಗಿದೆ. ಅಲ್ಲದೆ ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳುವಂತೆ ಕೇಳಲಾಗಿದೆ.
ಇನ್ನು ಕಂಪನಿಯ ಈ ನಡವಳಿಕೆಯಿಂದ ಆಕ್ರೋಶಗೊಂಡ ರಸ್ಸೆಲ್ ಸಂಬಂಧಿಯು ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಗಳ ಸಹಾಯ ಕೋರಿದ್ದಾರೆ. ಅಲ್ಲದೆ ವೇತನವಾಗಿ ಕೊಟ್ಟಂತಹ ನಾಣ್ಯಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರ್ಖಾನೆಯಲ್ಲಿನ ಕಾರ್ಮಿಕ ಪದ್ಧತಿಗಳ ಅನ್ಯಾಯದ ವಿರುದ್ಧ ದೂರಿದ್ದಕ್ಕೆ ಕಂಪನಿ ಈ ರೀತಿ ಮಾಡಿದೆ ಎಂದು ರಸ್ಸೆಲ್ ಕಿಡಿಕಾರಿದ್ದಾರೆ. ಅಲ್ಲದೆ ಈ ಘಟನೆ ಬಳಿಕ ರಸ್ಸೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಗರದ ಮೇಯರ್ ಸಮಸ್ಯೆ ಆಲಿಸಿದ್ರು. ನೌಕರ ಹಾಗೂ ಕಾರ್ಖಾನೆ ಮಾಲೀಕ ಜಾಸ್ಪರ್ ಚೆಂಗ್ ಸೋ ಅವರ ನಡುವೆ ನಡೆದ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯನ್ನು ವೇಲೆನ್ಜುವೆಲಾ ನಗರದ ಫೇಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರ ಮಾಡಲಾಯಿತು.
https://www.facebook.com/ValenzuelaCityGov/posts/10161192620653378