ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆ ಎಂದು ಅಮೆರಿಕಾದ ಔಷಧಿ ಕಂಪನಿ ಫಿಜರ್ ಹೇಳಿದೆ. 2022 ರ ಆರಂಭದ ವೇಳೆಗೆ 12 ವರ್ಷ ಕೆಳಗಿನ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗ್ತಿದೆ.
ಬುಧವಾರ,ಮೊದಲ ಬ್ಯಾಚ್ ಮಕ್ಕಳಿಗೆ ಚುಚ್ಚು ಮದ್ದು ನೀಡಲಾಗಿದೆ. 12 ವರ್ಷ ಕೆಳಗಿನ ಹಾಗೂ 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಈ ಲಸಿಕೆ ಪ್ರಯೋಗ ನಡೆಯುತ್ತಿದೆ. ಹಿಂದಿನ ತಿಂಗಳು ಮಾಡರ್ನಾ ಇಂಕ್, 12 ವರ್ಷ ಕೆಳಗಿನ ಮಕ್ಕಳಿಗೆ ಪ್ರಯೋಗ ಶುರು ಮಾಡಿದೆ. ಡಿಸೆಂಬರ್ ನಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಫಿಜರ್-ಬಯೋಟೆಕ್‌ನ ಕೊರೊನಾ ಲಸಿಕೆ ಪ್ರಯೋಗ ನಡೆಸುವಂತೆ ಯುಎಸ್ ರೆಗ್ಯೂಲೆಟರ್ಸ್ ಅನುಮೋದಿಸಿತ್ತು. ಈವರೆಗೆ ಅಮೆರಿಕಾದಲ್ಲಿ 6.6 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ.
ಅಮೆರಿಕಾದಲ್ಲಿ 16-17ನೇ ವಯಸ್ಸಿನವರಿಗೆ ಫಿಜರ್-ಬಯೋಟೆಕ್ ಕೊರೊನಾ ಲಸಿಕೆ ಮಾತ್ರ ನೀಡಲಾಗ್ತಿದೆ. ಮಾಡರ್ನಾ ಲಸಿಕೆ ನೀಡಲಾಗ್ತಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾಡರ್ನಾ ಲಸಿಕೆ ನೀಡಲಾಗ್ತಿದೆ. ಮಕ್ಕಳಿಗೆ ಇನ್ನೂ ಯಾವುದೇ ಕೊರೊನಾ ಲಸಿಕೆ ಬಂದಿಲ್ಲ. ಎಲ್ಲವೂ ಪ್ರಯೋಗದ ಹಂತದಲ್ಲಿದೆ.