alex Certify ಫೇಸ್​ ಬುಕ್​​ನಲ್ಲಿ ಟ್ರೆಂಡ್​ ಆಯ್ತು ಪೆಟ್​ ಶೇಮಿಂಗ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್​ ಬುಕ್​​ನಲ್ಲಿ ಟ್ರೆಂಡ್​ ಆಯ್ತು ಪೆಟ್​ ಶೇಮಿಂಗ್​…!

Pet Owners Form an FB Group to Shame Their Mischievous Animals and It's  Hilariousಸಾಕು ಪ್ರಾಣಿಗಳು ಮಾಡುವ ಕೆಟ್ಟ ಅಭ್ಯಾಸಗಳನ್ನ ರೆಡ್​ ಹ್ಯಾಂಡ್​ ಆಗಿ ಹಿಡಿದು ಅದರ ಫೋಟೋ ಇಲ್ಲವೇ ವಿಡಿಯೋ ತೆಗೆದು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡೋದು ಈಗ ಹೊಸ ಟ್ರೆಂಡ್​ ಆಗಿ ಬದಲಾಗಿದೆ.

ಇದಕ್ಕೆ ವಿಶೇಷ ಅರ್ಥ ಏನಿಲ್ಲದಿದ್ದರೂ, ಈ ರೀತಿಯ ಫನ್ನಿ ಪೋಸ್ಟ್​ಗಳ ಮೂಲಕ ಪ್ರಾಣಿಪ್ರಿಯರು ಒಬ್ಬರನ್ನೊಬ್ಬರು ರಂಜಿಸುವ ಕೆಲಸವನ್ನ ಮಾಡುತ್ತಿದ್ದಾರೆ.

ಫೇಸ್​ಬುಕ್​ನಲ್ಲಿ ರಚನೆಯಾಗಿರುವ ಪೆಟ್​ ಶೇಮಿಂಗ್​ ಗ್ರೂಪ್​ನಲ್ಲಿ ಸಾಕು ಪ್ರಾಣಿಗಳ ವಿಚಿತ್ರ ಅವತಾರಗಳ ವಿಡಿಯೋಗಳನ್ನ ಪೋಸ್ಟ್ ಮಾಡಲಾಗಿದ್ದು ಸಾಕಷ್ಟು ವೈರಲ್​ ಆಗಿದೆ. ಈ ಗ್ರೂಪ್​ನಲ್ಲಿ 102000ಕ್ಕೂ ಹೆಚ್ಚು ಸದಸ್ಯರಿದ್ದು ಸಿಕ್ಕಾಪಟ್ಟೆ ವಿಡಿಯೋಗಳನ್ನ ಅಪ್​ಲೋಡ್​ ಮಾಡಲಾಗಿದೆ.

ತಮ್ಮ ಸಾಕು ನಾಯಿಯ ಫೋಟೋ ಅಪ್​ಲೋಡ್​ ಮಾಡಿದ ಪ್ರಾಣಿ ಪ್ರಿಯರೊಬ್ಬರು, ನನ್ನ ಹೆಸರು ಬೌರ್ಬನ್​​ ಹಾಗೂ ನಾನು ನನ್ನ ಮಲವನ್ನೇ ತಿನ್ನುತ್ತೇನೆ. ನನ್ನ ಈ ಅಸಹ್ಯ ಅಭ್ಯಾಸವನ್ನ ನನ್ನ ಮಾಲೀಕರು ಕಂಡು ಹಿಡಿದಿದ್ದಾರೆ ಎಂದು ಬರೆದಿದ್ದಾರೆ. ನನಗೆ ಈ ರೀತಿ ಮಾಡಲು ನಾಚಿಕೆಯಾಗುತ್ತೆ ಏಕೆಂದರೆ ಮಲ ತಿಂದ ಬಾಯಿಯಿಂದಲೇ ನಾನು ನನ್ನ ಪೋಷಕರಿಗೆ ಚುಂಬನ ನೀಡಲು ಯತ್ನಿಸುತ್ತೇನೆ ಅಂತಾ ಮಾಲೀಕರು ಕ್ಯಾಪ್ಶನ್​ ಹಾಕಿದ್ದಾರೆ.

ಇನ್ನೊಬ್ಬ ಮಾಲೀಕರು ತಮ್ಮ ಗ್ರೇಟ್​ ಡೆನ್​ ನಾಯಿ ಇನ್ನೊಂದು ನಾಯಿಯ ಹಾಸಿಗೆ ಮೇಲೆ ಮಲಗಿಕೊಳ್ಳಲು ಹೋಗಿ ಸಿಕ್ಕಿಬಿದ್ದಾಗ ಅದು ಅಡಗಿಕೊಳ್ಳುವ ರೀತಿಯನ್ನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ, ಇದೇ ರೀತಿ ಸಾಕಷ್ಟು ವಿಡಿಯೋಗಳು ಪೆಟ್ ಶೇಮಿಂಗ್​​ ಗ್ರೂಪ್​ನಲ್ಲಿ ಲಭ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...