ಚೀನಾ: ನಾಯಿಗೆ ಇಂಜಕ್ಷನ್ ಕೊಡಿಸಲು ಅದನ್ನು ಕಾರ್ ಟಾಪ್ ಮೇಲೆ ಕೂರಿಸಿಕೊಂಡು ಓಡಾಡಿದ ವಿಡಿಯೋ ಈಗ ವೈರಲ್ ಆಗಿದೆ.
ಕಪ್ಪು ನಾಯಿ ಕಾರಿನ ಮೇಲೆ ನಿಂತು, ಕೆಲ ಹೊತ್ತು ಕುಳಿತು ಊರೆಲ್ಲ ನೋಡುತ್ತ ಸಾಗುವ ಸಿಸಿ ಟಿವಿ ಫುಟೇಜ್ ನ ವಿಡಿಯೋವನ್ನು ಸಿಚ್ಹುನ್ ಪ್ರಾಂತ್ಯದ ಟ್ರಾಫಿಕ್ ಪೊಲೀಸ್ ಲೆಶಾನ್ ಎಂಬುವವರು ಚೀನಾದ ಸಾಮಾಜಿಕ ಜಾಲತಾಣ ವೈಬ್ ನಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲೇಕೆ ನಾಯಿಯನ್ನು ಕೂರಿಸಿದ್ದೀರಿ ಎಂದು ಕೇಳಿದ್ದಕ್ಕೆ “ಕಾರಿನೊಳಕ್ಕೆ ಅದಕ್ಕೆ ಕೋಣೆಯಿಲ್ಲ” ಎಂದು ಉಡಾಫೆ ಉತ್ತರ ನೀಡಿದ್ದಾನೆ.
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಅದು ಉಸಿರುಗಟ್ಟಿಬಿಡುತ್ತದೆ ಎಂಬ ಆತಂಕವಿದೆ. ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುವ ರೂಢಿ ಅದಕ್ಕಿದೆ ಎಂದು ಮಾಲೀಕ ಹೇಳಿದ್ದಾನೆ. ಆದರೆ, ಆತ ಇದಕ್ಕೆ ಯಾವುದೇ ಶಿಕ್ಷೆ ಅಥವಾ ದಂಡ ಕಟ್ಟಬೇಕಾಯಿತೇ ಎಂಬುದು ಸ್ಪಷ್ಟವಾಗಿಲ್ಲ.