ತನ್ನ ಮಾಲೀಕನನ್ನ ಹುಡುಕಿಕೊಂಡು ಹೊರಟ ನಾಯಿಯೊಂದು ಬರೋಬ್ಬರಿ 100 ಕಿಲೋಮೀಟರ್ ದೂರ ಕ್ರಮಿಸಿದ ಘಟನೆ ಪೂರ್ವ ಚೀನಾದ ಕಿಡಾಂಗ್ ನಗರದಲ್ಲಿ ನಡೆದಿದೆ. ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿ 14 ದಿನಗಳ ಕಾಲ ಏಕಾಂಗಿ ಸಂಚಾರ ಮಾಡಿ ತನ್ನ ಮಾಲೀಕನನ್ನ ಸೇರುವಲ್ಲಿ ಯಶಸ್ವಿಯಾಗಿದೆ.
ತಮ್ಮ ಮನೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಾ ಇರೋದ್ರಿಂದ ಮಾಲೀಕ ನಾಯಿಯನ್ನ ತನ್ನ ಸ್ನೇಹಿತನ ಮನೆಯಲ್ಲಿ ತಾತ್ಕಾಲಿಕವಾಗಿ ಇರಿಸಿದ್ದರು ಎನ್ನಲಾಗಿದೆ.
ಜೂನ್ ತಿಂಗಳಲ್ಲಿ ಈ ನಾಯಿಯನ್ನ ಮಾಲೀಕ ತನ್ನ ಸ್ನೇಹಿತನ ಮನೆಗೆ ಕಳುಹಿಸಿ ಕೊಟ್ಟಿದ್ದರು. ನಾಲ್ಕು ತಿಂಗಳು ಸ್ನೇಹಿತನ ಮನೆಯಲ್ಲಿದ್ದ ನಾಯಿ ಅಲ್ಲಿಂದ ಏಕಾಏಕಿ ನಾಪತ್ತೆಯಾಗಿತ್ತು. 100 ಕಿಲೋಮೀಟರ್ಗಟ್ಟಲೇ ನಡೆದಿದ್ದರಿಂದ ಶ್ವಾನದ ಪಂಜುಗಳಲ್ಲಿ ರಕ್ತ ಬಂದಿದ್ದವು ಅಂತಾ ನಾಯಿ ಮಾಲೀಕ ಹೇಳಿದ್ದಾರೆ.