alex Certify ಕಣ್ಣಂಚನ್ನು ತೇವಗೊಳಿಸುತ್ತೆ ಶ್ವಾನದ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಶ್ವಾನದ ಹೃದಯಸ್ಪರ್ಶಿ ವಿಡಿಯೋ

ಶ್ವಾನಗಳು ತಮ್ಮ ಮಾಲೀಕರನ್ನ ಪ್ರೀತಿಸುವ ಬಗೆಗೆ ಬೇರೆ ಸಾಟಿಯಿಲ್ಲ. ತಮ್ಮ ಮಾಲೀಕನಿಗಾಗಿ ಜೀವ ಬಿಡೋಕೂ ಶ್ವಾನಗಳು ತಯಾರಿರ್ತಾವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಕಳೆದು ಹೋದ ಶ್ವಾನವೊಂದು ಮತ್ತೆ ತನ್ನ ಮಾಲೀಕನ ಜೊತೆ ಸೇರುವಲ್ಲಿ ಯಶಸ್ವಿಯಾಗಿದ್ದು ಬಹಳ ದಿನಗಳ ಬಳಿಕ ಮಾಲೀಕರನ್ನ ಕಂಡ ಶ್ವಾನ ವರ್ತಿಸಿದ ರೀತಿ ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ.

ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಈ ಶ್ವಾನವು ಮಾಲೀಕರಿಂದ ದೂರಾಗಿತ್ತು. ಸಂಸ್ಥೆಯೊಂದು ಶ್ವಾನ ಇರುವ ಬಗ್ಗೆ ಮಹಿಳೆಗೆ ಮಾಹಿತಿ ನೀಡಿತ್ತು. ಕೂಡಲೇ ಆ ಕೇಂದ್ರಕ್ಕೆ ಭೇಟಿ ನೀಡಿದ ಮಹಿಳೆ ತನ್ನ ನಾಯಿಯನ್ನ ಪ್ರೀತಿಯಿಂದ ಕರೆದಿದ್ದಾಳೆ.

ಓಡೋಡಿ ಬಂದ ಶ್ವಾನ ಆಕೆಯನ್ನ ನೆಕ್ಕಿ ನೆಕ್ಕಿ ಪ್ರೀತಿ ಮಾಡಿದೆ. ಅದರ ಪ್ರೇಮವನ್ನ ಕಂಡ ಮಾಲೀಕೆ ಹಾಗೂ ನೆರೆದವರೆಲ್ಲರ ಕಣ್ಣಂಚು ಒದ್ದೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಸಖತ್​ ವೈರಲ್​ ಆಗಿದೆ.

— ❤️A page to make you smile again ❤️ (@HopkinsBRFC) February 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...