ಕೊರೊನಾ ವೈರಸ್ನಿಂದಾಗಿ ವರ್ಕ್ ಫ್ರಂ ಹೋಂ ಎಂಬ ಪದ್ಧತಿ ಈಗ ಕಾಮನ್ ಆಗಿ ಬಿಟ್ಟಿದೆ. ಮನೆಯಲ್ಲೇ ಕೆಲಸ ಮಾಡುವ ಈ ವಿಧಾನದಿಂದಾಗಿ ವೈಯಕ್ತಿಕ ಕೆಲಸ ಯಾವಾಗ ಮಾಡಬೇಕು ವೃತ್ತಿ ಯಾವಾಗ ಮಾಡೋದು ಅನ್ನೋದೇ ಜನರಿಗೆ ದೊಡ್ಡ ಗೊಂದಲವಾಗಿ ಹೋಗಿದೆ.
ದಕ್ಷಿಣ ಅಮೆರಿಕದ ಪೆರು ಎಂಬಲ್ಲಿ ವಕೀಲನೊಬ್ಬ ಜೂಮ್ ಆಪ್ನಲ್ಲಿ ಕೋರ್ಟ್ ವಿಚಾರಣೆಯಲ್ಲಿ ಭಾಗಿಯಾಗಿದ್ದ ವೇಳೆ ಲೈವ್ನಲ್ಲೇ ಸೆಕ್ಸ್ ಮಾಡಿದ್ದಾನೆ..!
ಹೆಕ್ಟರ್ ಸಿಪ್ರಿಯಾನೊ ಪ್ಯಾರೆಡೆಸ್ ರೋಬಲ್ಸ್ ಎಂಬ ವಕೀಲ ಜೂಮ್ ಮೀಟ್ನಲ್ಲಿ ಕೋರ್ಟ್ ವಿಚಾರಣೆಯಲ್ಲಿ ಹಾಜರಾಗಿದ್ದ. ಈ ವೇಳೆ ಜಡ್ಜ್ ಎದುರಲ್ಲೇ ಈತ ಕಚೇರಿಯಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಈ ಕಂಪ್ಯೂಟರ್ನ ಕ್ಯಾಮರಾ ಆನ್ ಇದ್ದ ಕಾರಣ ವಿಚಾರಣೆಯಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಈ ದೃಶ್ಯವನ್ನ ನೋಡಿದ್ದಾರೆ .
ಕೂಡಲೇ ಜಡ್ಜ್ ಜಾನ್ ಚಾಚುವಾ ವಿಚಾರಣೆಯನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ. ಅಲ್ಲದೇ ವಕೀಲನಿದ್ದ ಸ್ಥಳಕ್ಕೆ ಪೊಲೀಸರನ್ನ ಕಳುಹಿಸಿದ್ದಾರೆ. ಆದರೆ ಆತನ ಜೊತೆ ಸೆಕ್ಸ್ ಮಾಡುತ್ತಿದ್ದ ಮಹಿಳೆ ಮಾತ್ರ ಕ್ಯಾಮರಾ ಆನ್ ಇರುವ ಬಗ್ಗೆ ಆತನನ್ನ ಅಲರ್ಟ್ ಮಾಡುತ್ತಲೇ ಇದ್ದಳು.