ಮೇ 22ರಂದು ಕಾಂಗೋ ಗಣರಾಜ್ಯದ ನೈರಾಗೊಂಗೋ ಪರ್ವತದಲ್ಲಿ ಜ್ವಾಲಾಮುಖಿ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮಾತ್ರವಲ್ಲದೇ 5000ಕ್ಕೂ ಹೆಚ್ಚು ಮಂದಿಯನ್ನ ಗೋಮಾ ನಗರದಿಂದ ಅನಿವಾರ್ಯವಾಗಿ ಶಿಫ್ಟ್ ಆಗಬೇಕಾಗಿ ಬಂತು.
ಈ ಎಲ್ಲಾ ದುರಂತಗಳದ್ದು ಕತೆ ಒಂದೆಡೆಯಾದ್ರೆ ಕೆಲ ಮಹಾನುಭಾವರು ಜ್ವಾಲಾಮುಖಿಯ ಮುಂದೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಲಾವಾರಸವು ಸಮೀಪದಲ್ಲಿದ್ದ ಮನೆ ಬೀದಿಗಳನ್ನ ಸುಡುತ್ತಿದ್ದರೂ ಈ ಫೋಟೋ ಪ್ರಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದ್ರಲ್ಲೇ ಬ್ಯುಸಿಯಾಗಿದ್ದಾರೆ.
ಕಳೆದ 2 ದಶಕಗಳ ಬಳಿಕ ನೈರಾಗಾಂಗೋ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಈ ಹಿಂದೆ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ 2002 ಮಂದಿ ಸಾವನ್ನಪ್ಪಿದ್ದರು ಹಾಗೂ 1 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು.