ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತುಂಬಾನೇ ಮುಜುಗರ ಉಂಟಾಗುತ್ತೆ. ಕೆಲವೊಮ್ಮೆಯಂತೂ ಹೊಟ್ಟೆಯಲ್ಲಿ ಏನಾದರೂ ಇದೇನಾ ಎಂದೆಲ್ಲ ಅನಿಸೋಕೆ ಶುರುವಾಗಿಬಿಡುತ್ತೆ. ನಿಮಗೂ ಏನಾದ್ರು ಈ ರೀತಿ ಅನಿಸಿದ್ರೆ ಈ ಸ್ಟೋರಿ ನೋಡಲೇಬೇಕು.
ಟರ್ಕಿಯ 52 ವರ್ಷದ ವ್ಯಕ್ತಿಯೊಬ್ಬರು ಇಂತಹದ್ದೊಂದು ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ವೇಳೆ ಆತನ ದೇಹದಲ್ಲಿ ಬರೋಬ್ಬರಿ 21 ಕೆಜಿ ತೂಕದ ಗಡ್ಡೆ ಇದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಟ್ರ್ಯಾಬ್ಜೋನ್ನ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಈ ಗಡ್ಡೆಯನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.