
ಅದ್ಬಾರಾ ನಿಲ್ದಾಣ ಸಮೀಪದ ಮುಖ್ಯ ಕಾರಿಡಾರ್ನಲ್ಲಿ ಬಸ್ ಹಾಳಾಗಿದ್ದು ಪ್ರಯಾಣಿಕರೆಲ್ಲ ಸೇರಿ ಬಸ್ನ್ನ ದೂಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಟ್ರಾನ್ಸ್ ಪೇಶಾವರ್ ವಕ್ತಾರ, ಬಸ್ನಲ್ಲಿ ಉಂಟಾದ ಚಿಕ್ಕ ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ. ನಮ್ಮ ಎಲ್ಲ ನಿಲ್ದಾಣಗಳಲ್ಲಿ ಇಂಜಿನಿಯರ್ಗಳು ಇರುತ್ತಾರೆ. ಅಲ್ಲದೇ ತುರ್ತು ಪರಿಸ್ಥಿತಿಗೆಂದೇ ಎಲ್ಲ ನಿಲ್ದಾಣಗಳಲ್ಲಿ ಹೆಚ್ಚುವರಿ ಬಸ್ಗಳನ್ನ ಇಡಲಾಗಿದೆ ಅಂತಾ ಹೇಳಿದ್ರು.
ಅಂದಹಾಗೆ ಈ ಹೈಟೆಕ್ ಬಸ್ ಈ ಹಿಂದೆಯೂ ಅಪಘಾತ ಹಾಗೂ ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ಸುದ್ದಿ ಮಾಡಿತ್ತು.