alex Certify ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನಿಂದ ಪೆಪ್ಪರ್​ ಸ್ಪ್ರೇ

ಇನ್ನೇನು ಟೇಕಾಫ್​ ಆಗಲಿದ್ದ ವಿಮಾನದೊಳಗೆ ಆಸೀನನಾಗಿದ್ದ ಪ್ರಯಾಣಿಕ ಅಕಸ್ಮಾತ್ಗಿ ಆ ಪೆಪ್ಪರ್​ ಸ್ಪ್ರೇಯನ್ನ ಒತ್ತಿದ ಕಾರಣ ಫ್ಲೈಟ್​​ನಲ್ಲಿದ್ದ ಪ್ರತಿಯೊಬ್ಬರು ಕೆಮ್ಮಿನಿಂದ ಬಳಲಿದ ಘಟನೆ ನಡೆಸಿದೆ. ಫ್ಲೋರಿಡಾದಿಂದ ನ್ಯೂ ಜೆರ್ಸಿಗೆ ಸಂಚರಿಸುತ್ತಿದ್ದ ವಿಮಾನ ಈ ಘಟನೆ ಬಳಿಕ ವಿಳಂಬವಾಗಿ ನಿಲ್ದಾಣ ತಲುಪಿದೆ.

ಯುನೈಟೆಡ್​ ಫ್ಲೈಟ್​ 1061 ಈಶಾನ್ಯ ಫ್ಲೋರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್​​​ ಆಗಲು ತಯಾರಾಗುತ್ತಿತ್ತು.ಆದರೆ ಈ ವೇಳೆ ಪ್ರಯಾಣಿಕರೊಬ್ಬರು ಪೆಪ್ಪರ್​ ಸ್ಪ್ರೇಯನ್ನ ಅಚಾನಕ್​ ಆಗಿ ಪ್ರೆಸ್​ ಮಾಡಿದ್ದಾರೆ.

ಚಲಾವಣೆಯಲ್ಲಿದ್ದ ವಿಮಾನದ ಒಳಗಿದ್ದ ಪ್ರಯಾಣಿಕರೆಲ್ಲರೂ ಕೆಮ್ಮೋಕೆ ಶುರು ಮಾಡಿದ್ರು. ಅಲ್ಲದೇ ಇದು ಕೋವಿಡ್​ ಕಾಲವಾಗಿರೋದ್ರಿಂದ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡೋಕೆ ಆರಂಭಿಸಿದ್ವಿ. ನಾನಂತೂ ಮಾಸ್ಕ್ ಹಾಕಿಕೊಂಡೆ ಎಂದು ಪ್ರಯಾಣಿಕ ಜೋಸೆಫ್​ ಗ್ರ್ಯಾಂಡೆ ಎಂಬವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಎಲ್ಲರೂ ಕೆಮ್ಮೋಕೆ ಆರಂಭಿಸಿದ ಬಳಿಕ ಅಲ್ಲೇ ಇದ್ದ ಪ್ರಯಾಣಿಕನೊಬ್ಬ ಅಯ್ಯೋ…..ನಾನು ಅಕಸ್ಮಾತ್​ ಆಗಿ ಪೆಪ್ಪರ್​ ಸ್ಪ್ರೇಯನ್ನು ಪ್ರೆಸ್​ ಮಾಡಿದೆ. ಅದು ನನ್ನ ಕೀ ಚೈನ್​​ನಲ್ಲಿತ್ತು ಎಂದು ಹೇಳಿಕೊಂಡಿದ್ದರು ಅಂತಾ ಗ್ರ್ಯಾಂಡೆ ಹೇಳಿದ್ದಾರೆ.

ವಿಮಾನದಿಂದ ಕೆಳಗಿಳಿದು ಹೋಗಲು ಅವಕಾಶ ನೀಡಲಾಯ್ತು. ನನ್ನ ಸಂಗಾತಿಗೆ ಅಸ್ತಮಾ ಸಮಸ್ಯೆ ಇದ್ದಿದ್ದರಿಂದ ನಮಗೆ ವಿಮಾನದಿಂದ ಕೆಳಗೆ ಇಳಿಯದೇ ಬೇರೆ ದಾರಿ ಇರಲಿಲ್ಲ ಎಂದು ಗ್ರ್ಯಾಂಡೆ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...