alex Certify ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ.

ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ ವ್ಯಕ್ತಿ ಒಟ್ಟಾರೆ 8.6 ಕಿಮೀ ದೂರವನ್ನು ಹಲವು ಲ್ಯಾಪ್‌ಗಳಲ್ಲಿ ಈಜಿದ್ದಾರೆ. ಕಿಂಗ್ ಜಾರ್ಜ್ ವೈಎಂಸಿಎ ಈಜುಕೊಳದ ಉದ್ದವನ್ನು ಬೆನ್ 344 ಬಾರಿ ಪ್ರದಕ್ಷಿಣೆ ಹಾಕಿದ್ದಾರೆ.

ಬೆನ್‌‌ರ ಈ ಯತ್ನದ ಸಂಪೂರ್ಣ ವಿಡಿಯೋವನ್ನು ಗಿನ್ನೆಸ್‌ ದಾಖಲೆ ಸಂಸ್ಥೆಗೆ ಕೊಡಲಾಗಿದ್ದು, ಅಧಿಕೃತ ಮನ್ನಣೆಗೆ ಕೋರಲಾಗಿದೆ.

ಮನ ಕಲಕುತ್ತೆ ‘ಸೆಕ್ಸ್ ವರ್ಕರ್ಸ್’ ಗಳ ಕರುಣಾಜನಕ ಕಥೆ

ಈ ಹಿಂದೆ ಕೈಕೋಳ ಹಾಕಿಕೊಂಡು 5.49 ಕಿಮೀ ಈಜಿದ್ದ ಎಲ್ಹಾಮ್ ಸದತ್‌ ಅಸ್ಗಾರಿ ಹೆಸರಿನ ವ್ಯಕ್ತಿಯ ಹೆಸರಲ್ಲಿ ಗಿನ್ನೆಸ್ ದಾಖಲೆ ಇತ್ತು.

ತನ್ನ ಮೂರನೇ ವಯಸ್ಸಿನಿಂದ ಈಜಿನ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಬೆನ್‌ ಈ ಶಿಸ್ತಿನಲ್ಲಿ ಪಾರಂಗತರಾಗಿದ್ದಾರೆ. ಡಬಲ್ ಆರ್ಮ್ ಪುಲ್ ಹಾಗೂ ಸೈಡ್‌ಸ್ಟ್ರೋಕ್‌ಗಳ ಮೂಲಕ ಈ ಹುಬ್ಬೇರಿಸುವ ಸಾಧನೆಗೈದಿದ್ದಾರೆ ಬೆನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...