ಅಮೆರಿಕದ ದಂಪತಿಯೊಂದು ರಾತ್ರಿ ವೇಳೆ ಅಳುವ ಮಗುವಿಗಾಗಿ ತಮ್ಮ ನೆರೆ ಹೊರೆಯ ಮನೆಯವರಿಗೆ ಕ್ಷಮಾಪಣಾ ಪತ್ರ ಕಳುಹಿಸಿದ್ದು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.
ಮ್ಯಾಥ್ಯೂ ಹಾಗೂ ಕೆಲೀ ವಾರ್ಡ್ ಈ ರೀತಿ ಅಕ್ಕಪಕ್ಕದ ಮನೆಯವರಿಗೆ ಪತ್ರ ಕಳಿಸುವ ಮೂಲಕ ಕ್ಷಮೆಯಾಚಿಸಿದ್ದಾರೆ. ಪತ್ರ ಸ್ವೀಕರಿಸಿದ ವ್ಯಕ್ತಿಯೊಬ್ಬರು ಇದನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪತ್ರದಿಂದ ಹೆಸರಿಸಲ್ಪಟ್ಟ, ಅಪಾರ್ಟ್ಮೆಂಟ್ನಲ್ಲಿ ಅವರ ನೆರೆಹೊರೆಯವರೊಬ್ಬರು ಅದರ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ನೀವೇನಾದರೂ ಮಗುವಿನ ಅಳುವಿನ ಶಬ್ದವನ್ನ ಕೇಳುತ್ತಿದ್ದರೆ ನಮಗಾಗಿ ಪ್ರಾರ್ಥಿಸಿ. ಏಕೆಂದರೆ ನಾವೂ ಇಲ್ಲಿ ತೊಂದರೆ ಅನುಭವಿಸಿದ್ದೇವೆ. ಈ ತೊಂದರೆ ಜಾಸ್ತಿ ದಿನ ಇರಲ್ಲ ಎಂಬ ನಂಬಿಕೆ ಇದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಕಿಟ್ಟಿ ಎಂಬವರು, ನಮ್ಮ ಮನೆಯ ಮುಂದೆ ಈ ಪತ್ರವನ್ನ ಇಡಲಾಗಿತ್ತು. ಇದನ್ನ ಓದಿ ನನಗೆ ಅಳುವೇ ಬಂತು. ನಾನೀಗ ಆ ಪೋಷಕರಿಗಾಗಿ ಕುಕ್ಕಿ ತಯಾರು ಮಾಡಲಿದ್ದೇನೆ ಎಂದು ಶೀರ್ಷಿಕೆ ನೀಡಲಾಗಿದೆ.