
ಇದೇ ರೀತಿ ಮಕ್ಕಳಿಗೆ ಸಾಂತಾ ವೇಷದಲ್ಲಿ ಬಂದು ಗಿಫ್ಟ್ ಕೊಡಬೇಕು ಎಂದು ಪ್ಲಾನ್ ಮಾಡಿದ ವ್ಯಕ್ತಿಯೊಬ್ಬರು ವಿದ್ಯುತ್ ತಂತಿ ಒಳಗೆ ಸಿಲುಕಿಕೊಂಡ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಸಾಂತಾ ಸಾಮಾನ್ಯವಾಗಿ ಹಿಮಸಾರಂಗ ಇಲ್ಲವೇ ಬಂಡಿ ಗಾಡಿ ಮೇಲೆ ಬರುತ್ತಾನೆ ಅನ್ನೋದು ನಂಬಿಕೆ. ಆದರೆ ಕ್ಯಾಲಿಫೋರ್ನಿಯಾದ ಸಾಂತಾ ವೇಷಧಾರಿಯೊಬ್ಬರು ಪ್ಯಾರಾ ಗ್ಲೈಡರ್ ಮೂಲಕ ಬರಲು ಹೋಗಿ ಭಾರೀ ದೊಡ್ಡ ಸಂಕಷ್ಟಕ್ಕೆ ಸಿಲುಕಿಹಾಕಿಕೊಂಡರು.
ಪ್ಯಾರಾಗ್ಲೈಡರ್ನಿಂದ ಕೆಳಗಿಳಿಯುವ ವೇಳೆ ಕೊಂಚ ಸಮಸ್ಯೆಯಾದ ಹಿನ್ನೆಲೆ ಅವರು ವಿದ್ಯುತ್ ತಂತಿಗಳಲ್ಲಿ ಸಿಲುಕಿಹಾಕಿಕೊಂಡರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವರನ್ನ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.