ಹಿಂದೂ ಹುಡುಗನೊಬ್ಬನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕೆ ಪಾಕಿಸ್ತಾನೀ ಮುಸ್ಲಿಂ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಬಂಧನದಲ್ಲಿ ಇಟ್ಟುಕೊಂಡಿದ್ದು, ಲವ್ ಮಾಡುವುದನ್ನು ಮುಂದುವರೆಸಿದರೆ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ.
ಇಟಲಿಯ ಅರರೆಜ್ಜೋ ಪ್ರದೇಶದ ಟಸ್ಕಾನ್ ಎಂಬ ಪಟ್ಟಣದಲ್ಲಿ ನಡೆದ ಈ ಘಟನೆಯಲ್ಲಿ; ಕೌಟುಂಬಿಕ ಬಂಧನದಲ್ಲಿದ್ದರೂ ಸಹ ಅದು ಹೇಗೋ ಮಾಡಿ ಪೊಲೀಸರಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ ಹುಡುಗಿ. ಪೊಲೀಸರು ಆ ಹುಡುಗಿಯನ್ನು ಕುಟುಂಬಸ್ಥರಿಂದ ಮುಕ್ತಳಾಗಿಸಿದ್ದು, ಹುಡುಗನೊಂದಿಗೆ ಸಂಪರ್ಕದಲ್ಲಿದ್ದಾರೆ.
ಹುಡುಗಿಯ ಮೊಬೈಲ್ ಅನ್ನು ಕಿತ್ತುಕೊಂಡಿರುವ ಕುಟುಂಬ ಅಗತ್ಯಬಿದ್ದಲ್ಲಿ ಮಾತ್ರವೇ ಆಕೆಯನ್ನು ಮನೆಯಿಂದ ಹೊರಗೆ ಹೋಗಲು ಕುಟುಂಬದ ಇತರರೊಂದಿಗೆ ಬಿಡುತ್ತಿತ್ತು.
ʼಪಾನ್ʼ ಜೊತೆ ಇನ್ನೂ ಲಿಂಕ್ ಆಗಿಲ್ವಾ ಆಧಾರ್…? ಜೂನ್ 30 ರ ನಂತ್ರ ಕಟ್ಟಬೇಕು ದಂಡ
ತನ್ನ ಓದಿಗಾಗಿ ಇದ್ದ ಕಂಪ್ಯೂಟರ್ ಮೂಲಕ ಹುಡುಗಿ ಪೊಲೀಸರಿಗೆ ಇಮೇಲ್ ಕಳುಹಿಸಿದ್ದು, ಹುಡುಗನೊಂದಿಗೆ ಭೇಟಿಯಾಗುವುದನ್ನು ಮುಂದುವರೆಸಿದರೆ ಪಾಕಿಸ್ತಾನಕ್ಕೆ ಮರಳಿ ಕರೆದೊಯ್ಯುವುದಾಗಿ ತನ್ನ ಕುಟುಂಬ ಹೆದರಿಸುತ್ತಿದೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ ಹುಡುಗಿ.
ಒಂದು ವರ್ಷದಿಂದ ಎಲ್ಲವೂ ಸಾಂಗವಾಗಿ ಹೋಗುತ್ತಿದ್ದ ಈ ಸಂಬಂಧದಲ್ಲಿ ಹುಡುಗನ ಧರ್ಮದ ಬಗ್ಗೆ ತಿಳಿಯುತ್ತಲೇ ತನ್ನ ಮನೆಯವರಿಗೆ ಅಸಹನೆ ಭುಗಿಲೆದ್ದಿದೆ ಎಂದು ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಹುಡುಗಿಯನ್ನು ರಕ್ಷಣಾ ಕೇಂದ್ರಕ್ಕೆ ಕರೆದೊಯ್ದಿದ್ದು, ಅಗತ್ಯಬಿದ್ದಲ್ಲಿ ಆಕೆಯ ಅಪ್ಪ ಮತ್ತು ಸಹೋದರರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.