ಅಮೆರಿಕದ ನೂತನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಗಾಯಕ ಲೂಯಿ ಫೋನ್ಸಿ ಹಾಗೂ ಡಿಜೆ ಕ್ಯಾಸಿಡಿ ಡೆಸ್ಪಾಷಿಯೋ ಹಾಡಿನ ಪ್ರದರ್ಶನ ಕೊಟ್ಟ ಬಳಿಕ 2017ರ ಈ ಹಿಟ್ ಸಾಂಗ್ ಬಲೇ ಸದ್ದು ಮಾಡುತ್ತಿದೆ.
ಪಾಕಿಸ್ತಾನ ಹುಡುಗನೊಬ್ಬ ತನ್ನದೇ ಲಿರಿಕ್ಸ್ನಲ್ಲಿ ಡಿಸ್ಪಾಷಿಯೋ ಹಾಡನ್ನು ಹೇಳುತ್ತಿರುವ ಎರಡು ವರ್ಷದ ಹಳೆಯ ವಿಡಿಯೋವೊಂದು ಆನ್ಲೈನ್ನಲ್ಲಿ ಮತ್ತೆ ವೈರಲ್ ಆಗಿದೆ.
ಜಾನ್ ರೋಮಿಯೋ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು 19 ಸೆಕೆಂಡ್ಗಳ ಈ ವಿಡಿಯೋ ಕ್ಲಿಪ್ಅನ್ನು ಪೋಸ್ಟ್ ಮಾಡಿದ್ದಾರೆ. ಚಾನೆಲ್ ಒಂದರ ವರದಿಗಾರರೊಂದಿಗೆ ಮಾತನಾಡುವ ವೇಳೆ ಈ ಹುಡುಗ ಹಾಡಿನ ಪೂರ್ಣ ಲಿರಿಕ್ಸ್ ಬರದೇ ಇದ್ದರೂ ಸಹ ಬಹಳ ಹುಮ್ಮಸ್ಸಿನಲ್ಲಿ ಹಾಡನ್ನು ತನ್ನದೇ ಧಾಟಿಯಲ್ಲಿ ಗುನುಗುತ್ತಿರುವುದನ್ನು ಕಂಡು ನೆಟ್ಟಿಗರು ಚಪ್ಪಾಳೆ ತಟ್ಟಿದ್ದರು.
https://twitter.com/ashwani2k/status/1352105924702441472?ref_src=twsrc%5Etfw%7Ctwcamp%5Etweetembed%7Ctwterm%5E1352105924702441472%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpakistani-boy-sings-despacito-with-his-own-lyrics-old-video-goes-viral-1761346-2021-01-21
https://twitter.com/Ajay74963910/status/1352100764005515266?ref_src=twsrc%5Etfw%7Ctwcamp%5Etweetembed%7Ctwterm%5E1352100764005515266%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpakistani-boy-sings-despacito-with-his-own-lyrics-old-video-goes-viral-1761346-2021-01-21