ಮುಂಬೈ ಭಯೋತ್ಪಾದಕ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೆ ಪಾಕಿಸ್ತಾನ ಈಗಲೂ ವಿಐಪಿ ಟ್ರೀಟ್ಮೆಂಟ್ ನೀಡುತ್ತಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ಲಾಹೋರ್ನ ಆಂಟಿ ಟೆರರಿಸ್ಟ್ ನ್ಯಾಯಾಲಯವು 2 ಭಯೋತ್ಪಾದಕ ಪ್ರಕರಣಗಳಲ್ಲಿ ಸಯೀದ್ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ಭಯೋತ್ಪಾದಕ ನಿಗ್ರಹ ಇಲಾಖೆ ಅಧಿಕಾರಿಗಳು ಹಫೀಜ್ ಸಸಯೀದ್ ನನ್ನ ವಿಐಪಿ ಎಂದು ಪರಿಗಣಿಸುತ್ತಿದೆ. ಸಯೀದ್ ತನ್ನ ಸಹಾಯಕರ ಎಸ್ಯುವಿ ಕಾರಿನಲ್ಲಿ ತಿರುಗಾಡುತ್ತಿದ್ದಾನೆ ಎಂಬ ವಿಚಾರ ಹೊರಬಿದ್ದಿದೆ.
ಭಯೋತ್ಪಾದನಾ ವಿರೋಧಿ ಕಾಯ್ದೆ 11 ಎಫ್ (2), ನಿಷೇಧಿತ ಸಂಸ್ಥೆಯಲ್ಲಿ ಸದಸ್ಯತ್ವ, ಭಯೋತ್ಪಾದನಾ ವಿಚಾರಕ್ಕೆ ಹಣ ಸಂಗ್ರಹ ಅಥವಾ ಇತರರ ಆಸ್ತಿಯನ್ನ ಸ್ವಾಧೀನ ಪಡಿಸಿಕೊಂಡಿದ್ದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಯೀದ್ಗೆ ಶಿಕ್ಷೆ ವಿಧಿಸಲಾಗಿದೆ. ಮನಿ ಲ್ಯಾಂಡರಿಂಗ್ ವಿಚಾರದಲ್ಲಿ ಸಯೀದ್ ಆಸ್ತಿ ಮುಟ್ಟುಗೋಲಿಗೂ ನ್ಯಾಯಾಲಯ ಆದೇಶಿಸಿದೆ.