alex Certify ಶಾಕಿಂಗ್ ಸುದ್ದಿ: ಮುಂಬೈ ದಾಳಿ ಮಾಸ್ಟರ್ ಮೈಂಡ್ ಗೆ ವಿಐಪಿ ಟ್ರೀಟ್​​ಮೆಂಟ್​​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ಸುದ್ದಿ: ಮುಂಬೈ ದಾಳಿ ಮಾಸ್ಟರ್ ಮೈಂಡ್ ಗೆ ವಿಐಪಿ ಟ್ರೀಟ್​​ಮೆಂಟ್​​..!

ಮುಂಬೈ ಭಯೋತ್ಪಾದಕ ದಾಳಿ ಮಾಸ್ಟರ್​ ಮೈಂಡ್​ ಹಫೀಜ್ ಸಯೀದ್ ಗೆ ಪಾಕಿಸ್ತಾನ ಈಗಲೂ ವಿಐಪಿ ಟ್ರೀಟ್​ಮೆಂಟ್​ ನೀಡುತ್ತಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

ಲಾಹೋರ್​​ನ ಆಂಟಿ ಟೆರರಿಸ್ಟ್​​ ನ್ಯಾಯಾಲಯವು 2 ಭಯೋತ್ಪಾದಕ  ಪ್ರಕರಣಗಳಲ್ಲಿ ಸಯೀದ್​​ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ಭಯೋತ್ಪಾದಕ ನಿಗ್ರಹ ಇಲಾಖೆ ಅಧಿಕಾರಿಗಳು ಹಫೀಜ್​ ಸಸಯೀದ್ ನನ್ನ ವಿಐಪಿ ಎಂದು ಪರಿಗಣಿಸುತ್ತಿದೆ. ಸಯೀದ್​​ ತನ್ನ ಸಹಾಯಕರ ಎಸ್​​ಯುವಿ ಕಾರಿನಲ್ಲಿ ತಿರುಗಾಡುತ್ತಿದ್ದಾನೆ ಎಂಬ ವಿಚಾರ ಹೊರಬಿದ್ದಿದೆ.

ಭಯೋತ್ಪಾದನಾ ವಿರೋಧಿ ಕಾಯ್ದೆ 11 ಎಫ್​ (2), ನಿಷೇಧಿತ ಸಂಸ್ಥೆಯಲ್ಲಿ ಸದಸ್ಯತ್ವ, ಭಯೋತ್ಪಾದನಾ ವಿಚಾರಕ್ಕೆ ಹಣ ಸಂಗ್ರಹ ಅಥವಾ ಇತರರ ಆಸ್ತಿಯನ್ನ ಸ್ವಾಧೀನ  ಪಡಿಸಿಕೊಂಡಿದ್ದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಯೀದ್​ಗೆ ಶಿಕ್ಷೆ ವಿಧಿಸಲಾಗಿದೆ. ಮನಿ ಲ್ಯಾಂಡರಿಂಗ್​ ವಿಚಾರದಲ್ಲಿ ಸಯೀದ್​ ಆಸ್ತಿ ಮುಟ್ಟುಗೋಲಿಗೂ ನ್ಯಾಯಾಲಯ ಆದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...