ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ವಿಶೇಷ ಸಹಾಯಕರಾಗಿದ್ದ ಮಾಜಿ ಲೆ. ಜನರಲ್ ಅಸೀಮ್ ಸಲೀಮ್ ಬಜ್ವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಸಂಬಂಧ ಸೋಮವಾರ ಟ್ವೀಟ್ ಮಾಡಿರುವ ಬಜ್ವಾ ಮಾಹಿತಿ ಮತ್ತು ಪ್ರಸಾರ ಖಾತೆಯ ಎಸ್ಎಪಿಎಂನಡಿಯಲ್ಲಿ ನನಗೆ ನೀಡಲಾಗಿದ್ದ ವಿಶೇಷ ಹುದ್ದೆಯಿಂದ ನನ್ನನ್ನ ಕೈಬಿಡುವಂತೆ ಮನವಿ ಮಾಡಿದ್ದೆ. ನನ್ನ ಕೋರಿಕೆಯನ್ನ ಪಾಕ್ ಪ್ರಧಾನಿ ಅಂಗೀಕರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ .
ಪಾಕಿಸ್ತಾನ – ಚೀನಾ ಆರ್ಥಿಕ ಕಾರಿಡಾರ್ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಾಜಿ ಲೆ. ಜನರಲ್ ಅಸೀಮ್ ಸಲೀಮ್ ಬಜ್ವಾ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.