2020-21ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂರಕ್ಷಿತ ಹೌಬಾರಾ ಬಸ್ಟರ್ಡ್ಗಳನ್ನ ಬೇಟೆಯಾಡಲು ಸೌದಿಯ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಇತರ ಇಬ್ಬರು ರಾಜಮನೆತನದ ಸದಸ್ಯರಿಗೆ ವಿಶೇಷ ಪರವಾನಗಿ ನೀಡಿದೆ.
ಬಲೂಚಿಸ್ತಾನ ಹಾಗೂ ಪಂಜಾಬ್ ಎಂಬ ಎರಡು ಪ್ರಾಂತ್ಯಗಳ ವಿವಿಧ ಪ್ರದೇಶಗಳಲ್ಲಿ ಬೇಟೆಯಾಡಲು ಅವಕಾಶ ನೀಡಲಾಗಿದೆ ಅಂತಾ ಡಾನ್ ಪತ್ರಿಕೆ ವರದಿ ಮಾಡಿದೆ.
ಹೌಬರಾ ಬಸ್ಟರ್ಡ್ ಜಾತಿಗೆ ಸೇರಿದ ಈ ಪಕ್ಷಿ ಮಧ್ಯ ಏಷ್ಯಾದ ತಂಪಾದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಪಾಕಿಸ್ತಾನದ ಬೆಚ್ಚಗಿನ ವಾತಾವರಣದಲ್ಲಿ ಚಳಿಗಾಲ ಕಳೆಯಲು ಪ್ರತಿವರ್ಷ ಇದು ದಕ್ಷಿಣ ದಿಕ್ಕಿಗೆ ವಲಸೆ ಹೋಗುತ್ತದೆ.
ಹೌಬರಾ ಸಂಖ್ಯೆ ಕ್ಷೀಣಿಸುತ್ತಿರೋದ್ರಿಂದ ವಿವಿಧ ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಪ್ಪಂದಗಳ ಅಡಿಯಲ್ಲಿ ಈ ಹಕ್ಕಿಯನ್ನ ರಕ್ಷಿಸಲಾಗಿದೆ. ಮಾತ್ರವಲ್ಲದೇ ಸ್ಥಳೀಯ ವನ್ಯಜೀವಿ ಕಾನೂನುಗಳ ಅಡಿಯಲ್ಲಿ ಈ ಪಕ್ಷಿಯನ್ನ ಬೇಟೆಯಾಡಲು ಪಾಕಿಸ್ತಾನಿಗಳಿಗೆ ಅವಕಾಶವಿಲ್ಲ.