ಭಾರತದ ಪುಲ್ವಾಮಾ ಮೇಲೆ ನಡೆಸಿದ ದಾಳಿ ಸರ್ಕಾರದ ಅತಿ ದೊಡ್ಡ ಸಾಧನೆ ಅಂತಾ ಪಾಕ್ ಸಂಸತ್ನಲ್ಲಿ ಸಚಿವ ಫವಾದ್ ಚೌದರಿ ಹೇಳುವ ಮೂಲಕ ಜಗತ್ತಿನೆದುರು ಮತ್ತೊಮ್ಮೆ ಪಾಪಿ ಪಾಕಿಸ್ತಾನದ ಬಣ್ಣ ಬಯಲಾಗಿದೆ.
ಇಮ್ರಾನ್ ಸರ್ಕಾರ ಪಾಕಿಸ್ತಾನವನ್ನ ಯಶಸ್ಸಿನ ಕಡೆಗೆ ತೆಗೆದುಕೊಂಡು ಹೋಗಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸಂಸತ್ನಲ್ಲಿ ಉತ್ತರಿಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಚೌಧರಿ, ಭಾರತದ ಪುಲ್ವಾಮಾ ಮೇಲೆ ನಡೆದ ದಾಳಿಗೆ ಯೋಜನೆಗೆ ಪ್ಲಾನ್ ಸಿದ್ಧವಾಗಿದ್ದೇ ಪಾಕಿಸ್ತಾನದಲ್ಲಿ. ಹೀಗಾಗಿ ಈ ಅಟ್ಯಾಕ್ನ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ಸಿಗಬೇಕು ಅಂತಾ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಪುಲ್ವಾಮಾ ದಾಳಿ ನಡೆಸಿದ್ದು ಪಾಕಿಸ್ತಾನ ಅಂತಾ ಭಾರತ ಮಾಡಿದ ಆರೋಪವನ್ನ ಇಮ್ರಾನ್ ಖಾನ್ ಸರ್ಕಾರ ತಿರಸ್ಕರಿಸುತ್ತಲೇ ಬಂದಿತ್ತು. ಆದರೆ ಈಗ ಪಾಕ್ ಸಂಸತ್ತಿನಲ್ಲೇ ಇಮ್ರಾನ್ ಖಾನ್ ಸರ್ಕಾರದ ನರಿ ಬುದ್ಧಿ ಬಟಾ ಬಯಲಾಗಿದೆ.