alex Certify ಕಸದ ಬುಟ್ಟಿಯಲ್ಲಿತ್ತು ಬರೋಬ್ಬರಿ 2.5 ಕೋಟಿ ಮೌಲ್ಯದ ವರ್ಣ ಚಿತ್ರಕಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸದ ಬುಟ್ಟಿಯಲ್ಲಿತ್ತು ಬರೋಬ್ಬರಿ 2.5 ಕೋಟಿ ಮೌಲ್ಯದ ವರ್ಣ ಚಿತ್ರಕಲೆ..!

ಜರ್ಮನಿಯ ಡುಯೆಸೆಲ್ಡಾರ್ಫ್​ ವಿಮಾನ ನಿಲ್ದಾಣದಲ್ಲಿ ಉದ್ಯಮಿ ಮರೆತುಹೋಗಿದ್ದ ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ ವರ್ಣಚಿತ್ರವನ್ನ ಅಲ್ಲೇ ಸಮೀಪದಲ್ಲಿ ಕಸದಬುಟ್ಟಿಯಲ್ಲಿ ಪತ್ತೆ ಹಚ್ಚಲಾಗಿದೆ.

ನವೆಂಬರ್​ 27ರಂದು ಜರ್ಮನಿಯ ಡಸಲ್ಡಾರ್ಫ್​ನಿಂದ ಟೆಲ್​ ಅವೀವ್​​ಗೆ ವಿಮಾನದಲ್ಲಿ ಹೊರಟಿದ್ದ ಉದ್ಯಮಿಯೊಬ್ಬರು ಆಕಸ್ಮಿಕವಾಗಿ ಚೆಕ್​ ಇನ್​ ಕೌಂಟರ್​​ನಲ್ಲಿ ಚಿತ್ರಕಲೆಯನ್ನ ಬಿಟ್ಟು ಹೋಗಿದ್ದರು.

ಇಸ್ರೆಲ್​​ನಲ್ಲಿ ವಿಮಾನ ಇಳಿಯುತ್ತಿದ್ದ ವೇಳೆ ತಾವು ಚಿತ್ರಕಲೆಯನ್ನ ಚೆಕ್​​ ಇನ್​​ನಲ್ಲೇ ಬಿಟ್ಟಿದ್ದು ಗಮನಕ್ಕೆ ಬಂದಿದೆ. ಕೂಡಲೇ ಡೆಸೆಲ್ಡಾರ್ಫ್​ ಪೊಲೀಸರನ್ನ ಸಂಪರ್ಕಿಸಿದ್ದಾರೆ. ಆದರೂ ಪೊಲೀಸರಿಗೆ ಅದೇ ಕೂಡಲೇ ವರ್ಣಚಿತ್ರ ಸಿಕ್ಕಿರಲಿಲ್ಲ. ಆದರೆ ಹೆಚ್ಚಿನ ತನಿಖೆಯಲ್ಲಿ ವರ್ಣಚಿತ್ರಕಲೆಯು ಮರು ಬಳಕೆ ಮಾಡುವ ವಿಭಾಗದ ಕಸದ ತೊಟ್ಟಿಯಲ್ಲಿ ಸೇರಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...