alex Certify ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ದೇಶದ ಕಷ್ಟ ಪ್ರತಿನಿಧಿಸಿದ ಮ್ಯಾನ್ಮಾರ್​ ಸ್ಪರ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವ ಸುಂದರಿʼ ಸ್ಪರ್ಧೆಯಲ್ಲಿ ದೇಶದ ಕಷ್ಟ ಪ್ರತಿನಿಧಿಸಿದ ಮ್ಯಾನ್ಮಾರ್​ ಸ್ಪರ್ಧಿ

ಮಿಸ್​​ ಯೂನಿವರ್ಸ್​ ಸ್ಪರ್ಧೆಯಲ್ಲಿ ಮ್ಯಾನ್ಮಾರ್​ ದೇಶವನ್ನ ಪ್ರತಿನಿಧಿಸುತ್ತಿರುವ ತುಜಾರ್​ ವಿಂಟ್​ ಲ್ವಿನ್​​ ಮಯನ್ಮಾರ್​ನ ರಾಜಕೀಯ ಹಗ್ಗ ಜಗ್ಗಾಟದ ಕುರಿತಂತೆ ಪರಿಣಾಮಕಾರಿ ಹೇಳಿಕೆಯೊಂದನ್ನ ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ʼಮ್ಯಾನ್ಮಾರ್​ಗಾಗಿ ಪ್ರಾರ್ಥಿಸಿʼ ಎಂದು ಬರೆಯಲಾದ ಬೋರ್ಡ್ ಹಿಡಿದು ವೇದಿಕೆಯ ಮೇಲೆ ಹೆಜ್ಜೆ ಹಾಕುವ ಮೂಲಕ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಕಿತ್ತಾಟದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಮಿಸ್​ ಮಯನ್ಮಾರ್​ ಆಗಿರುವ ತುಜಾರ್​​ ಈ ಸಂಬಂಧ ಮಾತನಾಡಿದ್ದು, ಅವರೆಲ್ಲ ನಮ್ಮನ್ನ ಪ್ರಾಣಿಗಳಂತೆ ಸಾಯಿಸುತ್ತಿದ್ದಾರೆ. ಮಾನವೀಯತೆ ಎಲ್ಲಿ ಹೋಗಿದೆ..? ನಾವಿಲ್ಲಿ ಅಸಹಾಯಕರಾಗಿದ್ದೇವೆ ಎಂದು ಹೇಳಿದ್ದಾರೆ.

ಮ್ಯಾನ್ಮಾರ್​​ನಲ್ಲಿ ಫೆಬ್ರವರಿಯಲ್ಲಿ ಮಿಲಿಟರಿ ಆಡಳಿತ ಬಂದಾಗಿನಿಂದ ಜನಜೀವನ ಅಸ್ವಸ್ಥವಾಗಿದೆ. ದೇಶಾದ್ಯಂತ ನಡೆಸಲಾಗುತ್ತಿರುವ ಅಸಹಕಾರ ಚಳವಳಿಯಲ್ಲಿ ಇಲ್ಲಿಯವರೆಗೆ 780ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

22 ವರ್ಷದ ಲ್ವಿನ್​ ಸಹ ಈ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಹಾಗೂ ಈ ಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.

ಸೈನಿಕರು ಎಲ್ಲಾ ಕಡೆ ಗಸ್ತು ತಿರುಗುತ್ತಾ ಇರುತ್ತಾರೆ ಹಾಗೂ ಕೆಲವೊಮ್ಮೆ ನಮಗೆ ಕಿರುಕುಳ ನೀಡಬೇಕು ಅಂತಾನೇ ರಸ್ತೆಗಳನ್ನ ಬ್ಲಾಕ್​ ಮಾಡುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅವರು ಹಿಂದೆಮುಂದೆ ನೋಡದೇ ಗುಂಡು ಹಾರಿಸುತ್ತಾರೆ. ನಮಗೆ ನಮ್ಮ ಯೋಧರನ್ನ ನೋಡಿದ್ರೆ ಭಯವಾಗುತ್ತೆ. ಅವರನ್ನ ನೋಡಿದಾಗಲೆಲ್ಲಾ ಕೋಪ ಮತ್ತು ಭೀತಿ ಒಟ್ಟಿಗೆ ಉಕ್ಕಿ ಬರುತ್ತೆ ಎಂದು ಲ್ವಿನ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...