alex Certify ಅನಾಥ ಆನೆಗಳ ಪ್ರೀತಿ ವಾತ್ಸಲ್ಯದ ವಿಡಿಯೋ ʼವೈರಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾಥ ಆನೆಗಳ ಪ್ರೀತಿ ವಾತ್ಸಲ್ಯದ ವಿಡಿಯೋ ʼವೈರಲ್ʼ

ಕಾಡು ಪ್ರಾಣಿಗಳ ಪೈಕಿ ಅತಿ ಬುದ್ಧಿವಂತ ಹಾಗೂ ವಾತ್ಸಲ್ಯ ಹೊಂದಿರುವ ಪ್ರಾಣಿಯೆಂದರೆ ಆನೆ. ಮಾನವನ ರೀತಿ ಕುಟುಂಬ ಪದ್ಧತಿಯಲ್ಲಿ ಬದುಕುವುದನ್ನು ಅನೇಕ ಆನೆಗಳಲ್ಲಿ ನೋಡಬಹುದು. ಇದೀಗ ಇದೇ ಆನೆಗಳ ವಿಡಿಯೋ ಒಂದು ವೈರಲ್‌ ಆಗಿದೆ.

ಹೌದು, ಕೀನ್ಯಾದಲ್ಲಿರುವ ಶೆಲ್ಡ್ರಿಕ್‌ ವನ್ಯಮೃಗ ಟ್ರಸ್ಟ್‌ ಶೇರ್‌ ಮಾಡಿರುವ ವಿಡಿಯೋದಲ್ಲಿ ಎರಡು ಕಾಡಾನೆಗಳು ಕೆಸರನ್ನು ಒಂದರ ಮೇಲೊಂದು ಹಾಕಿಕೊಂಡು ಆಡುತ್ತಿವೆ. ಈ ಎರಡು ಆನೆಗಳು ಅನಾಥ ಆನೆಗಳಂತೆ. ಆದರೆ ಈ ಎರಡು ಆನೆಗಳ ತಂದೆ ಒಂದೇ ಆನೆ ಎನ್ನುವ ಮಾತುಗಳನ್ನು ಟ್ರಸ್ಟ್‌ನವರು ಹೇಳಿದ್ದಾರೆ. ಈ ಎರಡು ಆನೆಗಳಿಗೆ ಕುಟುಂಬದವರು ಇಲ್ಲದಿದ್ದರೂ, ಎರಡು ಒಟ್ಟಿಗೆ ಬೆಳೆದಿವೆಯಂತೆ.

ಈ ಆನೆಗಳನ್ನು ಅಂಬೋಸೆಲಿ ಭಾಗದಿಂದ ತೆಗೆದುಕೊಂಡು ಬರಲಾಗಿದೆ. ಈ ಎರಡಕ್ಕೂ ಜಸಿರಿ ಮತ್ತು ಫರಾಜ ಎಂದು ಹೆಸರಿಡಲಾಗಿದೆ. ಈ ಎರಡು ಆಟವಾಡುತ್ತಿರುವ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಹುಟ್ಟುತ್ತ ಅನಾಥವಾಗಿದ್ದರೂ, ಈ ಎರಡು ನಂತರದ ದಿನದಲ್ಲಿ ಸೋದರರ ರೀತಿ ಬೆಳೆದಿದ್ದಾರೆ ಎನ್ನುವ ಮಾತುಗಳನ್ನು ಟ್ರಸ್ಟ್‌ನವರು ಹಾಗೂ ಆನೆಗಳನ್ನು ಪೋಷಿಸುತ್ತಿರುವ ಸಿಬ್ಬಂದಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...