alex Certify ತಪ್ಪಾದ ನಿಲ್ದಾಣದಲ್ಲಿ ಲ್ಯಾಂಡ್​ ಆಯ್ತು ನೇಪಾಳದ ವಿಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಾದ ನಿಲ್ದಾಣದಲ್ಲಿ ಲ್ಯಾಂಡ್​ ಆಯ್ತು ನೇಪಾಳದ ವಿಮಾನ..!

ನೇಪಾಳದ ವಿಮಾನಯಾನ ಸಂಸ್ಥೆಯೊಂದು ಡಿಸೆಂಬರ್​ 18ರಂದು ತನ್ನ ಪ್ರಯಾಣಿಕರನ್ನ ತಪ್ಪಾದ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೂಲಕ ಪ್ರಮಾದವೆಸಗಿದೆ. ಜನಕ್​ಪುರಕ್ಕೆ ಟಿಕೆಟ್​ ಬುಕ್ ಮಾಡಿದ್ದ 66 ಪ್ರಯಾಣಿಕರು ನಮ್ಮನೇಕೆ ಪೋಖರಾದಲ್ಲಿ ಇಳಿಸಿದ್ದೀರಾ ಎಂದು ಆಶ್ಚರ್ಯ ಹೊರಹಾಕಿದ್ದಾರೆ.

ದೇಶಿ ವಿಮಾನಯಾನ ಸಂಸ್ಥೆಯಾದ ಬುದ್ಧ ಏರ್​ ಡಿಸೆಂಬರ್​ 18ರಂದು ಕಾಠ್ಮಂಡುವಿನ ತ್ರಿಭುವನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ದೇಶದ ಎರಡನೇ ಅತಿದೊಡ್ಡ ನಗರವಾದ ಪೋಖರಾದಲ್ಲಿ ಲ್ಯಾಂಡ್ ಆಗಿದೆ. ಆದರೆ ವಿಚಿತ್ರ ಅಂದರೆ ಈ ವಿಮಾನದ ಕೊನೆಯ ನಿಲ್ದಾಣ ದೇಶದ ದಕ್ಷಿಣ ಭಾಗದಲ್ಲಿರುವ ಜನಕ್​ಪುರವಾಗಿತ್ತು. ಈ ಎರಡು ನಗರಗಳು 400 ಕಿಮೀಗಿಂತಲೂ ಹೆಚ್ಚು ಅಂತರವನ್ನ ಹೊಂದಿವೆ.

ಸಂವಹನ ಕೊರತೆಯಿಂದಾಗಿ ಈ ಪ್ರಮಾದ ಸಂಭವಿಸಿದೆ ಎಂದು ವಿಮಾನಯಾನ ಕಾರ್ಯನಿರ್ವಾಹಕ ಅಧಿಕಾರಿ ಅಸ್ನಾ ಬಾಸ್ನೆಟ್​ ಮಾಹಿತಿ ನೀಡಿದ್ರು. ಕೂಡಲೇ ಏರ್​ಲೈನ್​ ಸಂಸ್ಥೆ ಪ್ರಯಾಣಿಕರು ಜನಕ್​ಪುರ ತಲುಪಲು ವ್ಯವಸ್ಥೆ ಮಾಡಿದ್ದು ಪರಿಸ್ಥಿತಿ ತಿಳಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...