alex Certify ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಪೋಸ್ಟ್

ವಾಷಿಂಗ್ಟನ್: 20 ಸಾವಿರ ಖಾಲಿ ಕುರ್ಚಿಗಳನ್ನು ದೊಡ್ಡ ಮೈದಾನದಲ್ಲಿ ಹಾಕಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿ.ಜೆ. ಕೊಯ್ಸ್ಲರ್ ಎಂಬುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ.‌

“ಇಂದು ರಾಷ್ಟ್ರೀಯ ಕೋವಿಡ್-19 ದಿನ. ಈ ಒಂದೊಂದು ಕುರ್ಚಿಯೂ ಕೋವಿಡ್ ಗೆ ಬಲಿಯಾದ 10 ಜೀವಗಳನ್ನು ಪ್ರತಿನಿಧಿಸುತ್ತವೆ. ಜನಪ್ರತಿನಿಧಿಗಳು ಹಾಗೂ ಆಡಳಿತಗಾರರು ಕೋವಿಡ್ ನಿಯಂತ್ರಣಕ್ಕೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಲಿ” ಎಂದು ಅವರು ಕ್ಯಾಪ್ಶನ್ ಕೊಟ್ಟಿದ್ದಾರೆ.

ಅವರ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ. ಅದರಲ್ಲಿ ಒಂದು ಪೋಸ್ಟ್ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ. “ಅದರಲ್ಲಿ ಒಂದು ಕುರ್ಚಿ ನನ್ನ ಅಮ್ಮನಾಗಿದ್ದಾಳೆ” ಎಂದು ಡೆಬ್ಬಿ ಎಂಬ ಟ್ವಿಟ್ಟರ್ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಅಮೆರಿಕಾದಲ್ಲಿ ಕೋವಿಡ್ 19 ಗೆ ಇದುವರೆಗೆ 7 ಲಕ್ಷಕ್ಕೂ ಅಧಿಕ ಜನ ಒಳಗಾಗಿದ್ದಾರೆ. 2.09 ಲಕ್ಷ ಜನರು ಬಲಿಯಾಗಿದ್ದಾರೆ.

https://twitter.com/GailRyff/status/1312841672015794181?ref_src=twsrc%5Etfw%7Ctwcamp%5Etweetembed%7Ctwterm%5E1312841672015794181%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-globally%2Fempty-chairs-showing-lives-lost-due-to-covid-19-6703714%2F

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...