
ದ್ವೀಪದಲ್ಲಿ ರಜೆಯ ಮಜಾವನ್ನ ಕಳೆಯೋದು ಅಂದರೆ ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ..? ಅದರಲ್ಲೂ ನಿಮಗೆ ಉಚಿತವಾಗಿ ದ್ವೀಪದಲ್ಲಿ ರೌಂಡ್ಸ್ ಹೊಡೆಯುವ ಅವಕಾಶ ಸಿಗಲಿದೆ ಹಾಗೂ ಇದರ ಜೊತೆಯಲ್ಲಿ ಸಂಬಳವನ್ನೂ ಕೊಡಲಿದ್ದಾರೆ ಅಂದರೆ ಇದನ್ನ ಬಿಡೋಕೆ ನೀವು ತಯಾರಿದ್ದೀರೇ..?
ಬಹಮಾಸ್ ನ ಶ್ರೀಮಂತ ಕುಟುಂಬವೊಂದು ತಮ್ಮ ಖಾಸಗಿ ದ್ವೀಪವನ್ನ ನಿರ್ವಹಣೆ ಮಾಡಲು ದಂಪತಿಯನ್ನ ಹುಡುಕುತ್ತಿದ್ದು, ಅವರಿಗೆ ವರ್ಷಕ್ಕೆ 88 ಲಕ್ಷ ರೂಪಾಯಿ ಸಂಭಾವನೆ ನೀಡಲು ತಯಾರಾಗಿದೆ.
KYC ವಿಷಯದಲ್ಲಿ ಬ್ಯಾಂಕ್ ಗ್ರಾಹಕರಿಗೆ ಆರ್.ಬಿ.ಐ.ನಿಂದ ನೆಮ್ಮದಿ ಸುದ್ದಿ
ಬಹಮಾಸ್ನಲ್ಲಿರುವ ಖಾಸಗಿ ದ್ವೀಪದ ನಿರ್ವಹಣೆಯನ್ನ ನೋಡಿಕೊಳ್ಳಲು ಈ ಕುಟುಂಬವು ದೇಶಿ ದಂಪತಿಯ ಹುಡುಕಾಟದಲ್ಲಿದೆ. ಈ ದ್ವೀಪದಲ್ಲಿ ಕೆಲಸ ಪಡೆದು ಆರಾಮಾಗಿ ಇರಬಹುದು ಎಂದು ಯಾರೂ ಭಾವಿಸುವಂತಿಲ್ಲ. ಏಕೆಂದರೆ ಈ ಕೆಲಸಕ್ಕೆ ನಿಯೋಜನೆಗೊಂಡ ದಂಪತಿ ಫ್ಲೋರಿಡಾ, ಬಹಮಾಸ್ ಹಾಗೂ ನಪ್ಲೆಸ್ನಲ್ಲಿರುವ ಮನೆಗಳ ನಿರ್ವಹಣೆ ಮಾಡಬೇಕು.
ಈ ಕೆಲಸಕ್ಕೆ ಆಯ್ಕೆಯಾದ ದಂಪತಿಗೆ ಪ್ರತಿ ವರ್ಷ 88 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಸಂಭಾವನೆ ನೀಡುವ ಜೊತೆಗೆ ಅವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಓಡಾಟಕ್ಕೆ ಕಾರನ್ನು ನೀಡಲಾಗುವುದು ಎಂದು ಹೇಳಿದೆ.
ಇದು ನಿಜವಾಗಿಯೂ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವಾಗಿದೆ. ಅನೇಕರು ಉತ್ಸಾಹದಿಂದ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಸದ್ಯದಲ್ಲೇ ಈ ಅರ್ಜಿಗಳನ್ನ ಶಾರ್ಟ್ ಲಿಸ್ಟ್ ಮಾಡಲಿದ್ದೇವೆ ಎಂದು ಉದ್ಯೋಗದಾತರು ಹೇಳಿದ್ದಾರೆ.
ಈ ಹುದ್ದೆಗೆ ಆಯ್ಕೆಯಾದ ದಂಪತಿ ಸೋಮವಾರದಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮಾರನೇ ದಿನ ಬೆಳಗ್ಗೆ 5 ಗಂಟೆಯವರೆಗೂ ಸೇವೆಯಲ್ಲಿ ಇರಬೇಕು ಎಂದು ಹೇಳಲಾಗಿದೆ.