ಕೊರೋನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್-19 ನಾಲಿಗೆ ಕಾಣಿಸಿಕೊಂಡಿದೆ.
ವೈರಾಣು ಸೋಂಕು ತಗುಲಿದ ಅನೇಕರ ನಾಲಿಗೆ ಮೇಲೆ ಗುಳ್ಳೆಗಳು ಎದ್ದಿದ್ದು, ಉರಿಯೂತ ಅನುಭವಿಸುವಂತಾಗಿದೆ. ಅಲ್ಲದೆ, ಚರ್ಮದ ಮೇಲೂ ದದ್ದುಗಳು ಎದ್ದು, ನೋವು, ಕಡಿತ ಅನುಭವಿಸಿದ ಪ್ರಕರಣಗಳು ಪತ್ತೆಯಾಗಿವೆ.
ಯುಕೆಯಲ್ಲಿ ರೂಪಾಂತರಿತ ಪ್ರಭೇದ ಕೊರೋನಾ ನಂತರ ಈ ಲಕ್ಷಣಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಕೊರೋನಾದ ಅಧಿಕೃತ ಲಕ್ಷಣಗಳ ಪಟ್ಟಿಯಲ್ಲಿ ಸೇರಿಸುವಂತೆ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್)ಗೆ ತಜ್ಞರು ಮನವಿ ಮಾಡಿದ್ದಾರೆ.
ಕೊರೊನಾ ಮಾರ್ಗಸೂಚಿಯಂತೆಯೇ ನಡೆಯಿತು ಅಂತ್ಯಕ್ರಿಯೆ…. ಆದರೆ 10 ದಿನಗಳ ಬಳಿಕ ನಡೆದಿದ್ದೇ ಬೇರೆ….!
ಈ ಲಕ್ಷಣಗಳ ಬಗ್ಗೆ ಅರಿವಿಲ್ಲದೆ ಕೊರೋನಾವನ್ನೂ ನಿರ್ಲಕ್ಷ್ಯ ಮಾಡಿ ಜೀವಕ್ಕೆ ಕುತ್ತು ಬರುತ್ತದೆ. ಹೀಗಾಗಿ ಈ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಒಳಿತು ಎಂದು ಸ್ಪೇನ್ ನ ವಿಜ್ಞಾನಿಗಳ ತಂಡ ಎಚ್ಚರಿಸಿದೆ.