
ಅದೆಷ್ಟೋ ಅದ್ಭುತ ಜೀವಜಂತುಗಳಿಗೆ ಸಮುದ್ರ ಆಶ್ರಯ ನೀಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂಡೋನೇಷಿಯಾದಲ್ಲಿ ಮೀನುಗಾರರೊಬ್ಬರ ಬಲೆಗೆ ಒಂದೇ ಕಣ್ಣನ್ನ ಹೊಂದಿರುವ ಶಾರ್ಕ್ ಮೀನು ಪತ್ತೆಯಾಗಿದೆ.
ಮಲುಕು ಪ್ರಾಂತ್ಯದಲ್ಲಿ ಅಕ್ಟೋಬರ್ 10ರಂದು ಇಂತಹ ವಿಚಿತ್ರ ಮೀನು ಪತ್ತೆಯಾಗಿದೆ, ಬಲೆಗಾರರ ಬಲೆಗೆ ಬಿದ್ದಿದ್ದ ದೊಡ್ಡ ಶಾರ್ಕ್ನ್ನ ಕತ್ತರಿಸಿದ ಮೀನುಗಾರ ಅದರ ಹೊಟ್ಟೆಯಿಂದ ಕರಳನ್ನ ಬೇರ್ಪಡಿಸ್ತಾ ಇರೋ ಸಂದರ್ಭದಲ್ಲಿ ಅದರ ಹೊಟ್ಟೆಯಲ್ಲಿ ಈ ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆಯಾಗಿದೆ. ಇದು ಕೂಡ ಮೀನುಗಾರರ ಕೈ ಸೇರೋ ಒಳಗಾಗಿಯೇ ತನ್ನ ಜೀವ ಕಳೆದುಕೊಂಡಿದೆ.
ಗ್ರೀಕ್ ದಂತಕತೆಗಳಲ್ಲಿ ಬರುವ ಸೈಕ್ಲೋಪ್ಸ್ ಎಂಬ ದೈತ್ಯ ಜೀವಿ ಕೂಡ ಒಂದು ಕಣ್ಣನ್ನ ಹೊಂದಿತ್ತು. ಇದು ದೇವರ ಜಾನಪದ ಕತೆಯ ಒಂದು ಭಾಗವಾಗಿತ್ತು. ಇಲ್ಲಿ ಪತ್ತೆಯಾದ ಶಾರ್ಕ್ ಕೂಡ ತಲೆಯ ಮಧ್ಯದಲ್ಲಿ ಒಂದು ಕಣ್ಣು ಹಾಗೂ ಸಣ್ಣ ರೆಕ್ಕೆಗಳನ್ನ ಹೊಂದಿದೆ.