ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಮುದ್ರದಲ್ಲಿ 22 ಕೆಜಿ ತೂಕದ ದೈತ್ಯದೇಹಿ ಕೆಂಪು ಎಂಪರರ್ ಮೀನು ಪತ್ತೆಯಾಗಿದೆ.
ಕ್ವೀನ್ಸ್ ಲ್ಯಾಂಡ್ ನ ರೈನ್ ಬೋ ಸಮುದ್ರದಲ್ಲಿ ಕಳೆದ 30 ವರ್ಷದಿಂದ ಮೀನುಗಾರಿಕೆ ಮಾಡುತ್ತಿರುವ ಎಡ್ ಫಾಲ್ಕನರ್, ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ರೆಡ್ ಎಂಪರರ್ ಮೀನನ್ನು ಬೇಟೆ ಆಡಿದ್ದಂತೆ.
ಇದುವರೆಗೆ 19 ಕೆಜಿ ತೂಕದ ಮೀನೊಂದನ್ನು ಈ ಹಿಂದೆ ಬೇಟೆಯಾಡಿದ್ದೇ ದಾಖಲೆಯಾಗಿತ್ತು. ಇದೀಗ ಇದು ಜೀವಮಾನದ ದಾಖಲೆ ಎಂದು ಬಣ್ಣಿಸಿಕೊಂಡಿದ್ದಾರೆ.
ಗಾಳ ಹಾಕಿದಾಗ ಸಮುದ್ರದ ಯಾವುದೋ ಎಮ್ಮೀನು ಎಂದು ಭಾಸವಾಗಿತ್ತು. ಆದರೆ, ಇಷ್ಟೊಂದು ದೈತ್ಯಾಕಾರದ ಮೀನು ಎಂಬುದು ಗೊತ್ತಿರಲಿಲ್ಲ. ಈ ಮೀನನ್ನು ತಿನ್ನುವುದು ಬೇಡ ಎಂದು ತೀರ್ಮಾನಿಸಿರುವ ಫಾಲ್ಕನರ್, ಕ್ವೀನ್ಸ್ ಲ್ಯಾಂಡ್ ಮ್ಯೂಸಿಯಂಗೆ ಕೊಡುಗೆಯಾಗಿ ಕೊಟ್ಟಿದ್ದು, ವಿಜ್ಞಾನ ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲಿ ಎಂದು ಅಪೇಕ್ಷೆ ಪಟ್ಟಿದ್ದಾರೆ.
ಮೀನು ಸ್ವೀಕರಿಸಿರುವ ವಿಜ್ಞಾನಿಗಳು, ಖಂಡಿತವಾಗಿ ಈ ಬಗ್ಗೆ ಸಂಶೋಧನೆ ಅಗತ್ಯವಿದೆ. ಇಷ್ಟು ದೊಡ್ಡದಾಗಿ ಬೆಳೆದಿರುವ ಅಪರೂಪದ ಕೆಂಪು ಎಂಪರರ್ ಇದು. ಇದರ ಜೀವತಾವಾಧಿ ಸೇರಿದಂತೆ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಯಲಿದೆ ಎಂದು ತಿಳಿಸಿದ್ದಾರೆ.