ವ್ಯಾಲೆಂಟೈನ್ಸ್ ಡೇ ದಿನ ಬಾಳ ಸಂಗಾತಿಗೆ ಅನೇಕರು ಅವರ ನೆಚ್ಚಿನ ವಸ್ತುಗಳನ್ನ ಉಡುಗೊರೆಯಾಗಿ ನೀಡ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಮಾತ್ರ ತನ್ನ ಪತಿಗೆ ಆತ ಇನ್ಸ್ಟಾಗ್ರಾಂನಲ್ಲಿ ಲೈಕ್ ಮಾಡಿದ ಎಲ್ಲಾ ಹುಡುಗಿಯರ ಫೋಟೋವನ್ನ ಉಡುಗೊರೆಯಾಗಿ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟಿಕ್ಟಾಕ್ನಲ್ಲಿ ವಿಡಿಯೋ ಶೇರ್ ಮಾಡಿರುವ ಗ್ಲೋರಿಯಾ, ವ್ಯಾಲಂಟೈನ್ ಡೇ ದಿನ ನಿಮ್ಮ ಸಂಗಾತಿಯಿಂದ ಏನನ್ನು ಪಡೆದಿದ್ದೀರಾ..? ಎಂದು ಶೀರ್ಷಿಕೆ ನೀಡಿದ್ದಾರೆ.