alex Certify ಅಮೆರಿಕ ಚುನಾವಣೆ ಫಲಿತಾಂಶದ ದಿನ ನಡೀತು ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಚುನಾವಣೆ ಫಲಿತಾಂಶದ ದಿನ ನಡೀತು ಈ ಘಟನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ 46ನೇ ಅಧ್ಯಕ್ಷರಾಗಿ ಬಿಡೆನ್​ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಕೂಡ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಶನಿವಾರ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾದಲ್ಲಿ ಬಿಡೆನ್​-ಹ್ಯಾರಿಸ್​ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

ಒಂದು ಕಡೆ ಡೆಮಾಕ್ರಟಿಕ್​ ಪಕ್ಷಕ್ಕೆ ರಾಜಕಾರಣಿಗಳು, ಸಿನಿ ತಾರೆಯರು, ಕ್ರೀಡಾಪಟುಗಳು, ಸಾಮಾನ್ಯ ಜನತೆ ಶುಭ ಕೋರುತ್ತಿದ್ರೆ ಇನ್ನೊಂದು ಕಡೆ ಟ್ರಂಪ್​ ಬೆಂಬಲಿಗರು ಟ್ರೋಲ್​, ಮೀಮ್ಸ್ ಮಾಡೋದ್ರಲ್ಲಿ ಬ್ಯುಸಿಯಾದ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ಕಂಡು ಬಂದಿವೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಸಿಎನ್​ಎನ್​ ನಿರೂಪಕ ಕಣ್ಣೀರು ಹಾಕಿದ ದೃಶ್ಯವೊಂದು ಕಂಡುಬಂತು. ಲೈವ್​ನಲ್ಲೇ ಭಾವುಕರಾದ ವಾನ್​ ಜೋನ್ಸ್, ಇಂದು ಬೆಳಗ್ಗೆ ಪೋಷಕರ ಸ್ಥಾನದಲ್ಲಿ ನಿಲ್ಲೋದು ಸುಲಭ ಎನಿಸುತ್ತಿದೆ. ವ್ಯಕ್ತಿತ್ವ ಎಷ್ಟು ಮುಖ್ಯ ಎಂದು ಮಕ್ಕಳಿಗೆ ತಿಳಿಸೋದು ಸುಲಭ ಎನಿಸುತ್ತಿದೆ. ಅಲ್ಲದೇ ಸತ್ಯ ಎಷ್ಟು ಮುಖ್ಯ ಅನ್ನೋದನ್ನೂ ಅವರಿಗೆ ಕಲಿಸಿ ಎಂದು ಹೇಳಿದ್ದಾರೆ.

ಇತ್ತ ಬಿಡೆನ್​ ಚುನಾವಣೆ ವಿಜಯದ ವರದಿ ಮಾಡುತ್ತಿದ್ದ ನ್ಯೂಸ್​ 12ನ ವರದಿಗಾರ ಅಲೆಕ್ಸ್ ಲೈವ್​ನಲ್ಲಿ ಜನರ ಪ್ರತಿಕ್ರಿಯೆಗಳನ್ನ ಸಂಗ್ರಹಿಸುತ್ತಿದ್ದರು. ಈ ವೇಳೆ ಟ್ರಂಪ್​ ಅಭಿಯಾನದ ಟೀ ಶರ್ಟ್ ಹಾಕಿದ್ದ ವ್ಯಕ್ತಿಯನ್ನ ನಿಲ್ಲಿಸಿದ ಅಲೆಕ್ಸ್ ಪ್ರತಿಕ್ರಿಯೆ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಲೈವ್​ನಲ್ಲಿ ವರದಿಗಾರನ ವಿರುದ್ಧ ಆಕ್ರೋಶ ಹೊರಹಾಕಿ ನಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...