ಯುವತಿಯೊಬ್ಬಳು ತನ್ನ ತಲೆಯ ಮೇಲೆ ಹಾಲು ತುಂಬಿದ ಗ್ಲಾಸ್ ಇಟ್ಟುಕೊಂಡು ಈಜಿ ವಿಶ್ವ ದಾಖಲೆ ಮಾಡಿದ್ದಾಳೆ.
23 ವರ್ಷದ ಕಾತೈ ಲೆಡಕಿ ಎಂಬ ಈಜುಗಾರ್ತಿ ಐದು ಒಲಿಂಪಿಕ್ ಗೋಲ್ಡ್ ಮೆಡಲ್ ಹಾಗೂ 15 ವರ್ಲ್ಡ್ ಚಾಂಪಿಯನ್ ಶಿಪ್ ಗೋಲ್ಡ್ ಮೆಡಲ್ ಗೆದ್ದಿದ್ದಾರೆ.
ಈಗ ಚಾಕೊಲೇಟ್ ಮಿಲ್ಕ್ ನ ಗ್ಲಾಸ್ ಅನ್ನು ತಲೆಯ ಮೇಲೆ ಇಟ್ಟುಕೊಂಡು ಆಕೆ ಸುಮಾರು 100 ಮೀಟರ್ ಸ್ವಿಮ್ಮಿಂಗ್ ಫೂಲ್ ನಲ್ಲಿ ತಲೆ ಎತ್ತದೆ. ಒಂದು ಹನಿಯೂ ಹಾಲು ಚೆಲ್ಲದೆ 50 ಸೆಕೆಂಡ್ ಒಳಗೇ ಈಜಿ ಇನ್ನೊಂದು ದಡ ಸೇರಿದ್ದಾಳೆ.
ಅದರ ವಿಡಿಯೋವನ್ನು ಸ್ವತಃ ಟ್ವೀಟ್ ಮಾಡಿದ್ದು , 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಐದೂವರೆ ಸಾವಿರ ಜನ ರೀ ಟ್ವೀಟ್ ಮಾಡಿದ್ದು 32 ಸಾವಿರ ಜನ ಲೈಕ್ ಮಾಡಿದ್ದಾರೆ. ಸಾಕಷ್ಟು ಜನ ಕಮೆಂಟ್ ಮಾಡಿ ಪ್ರೋತ್ಸಾಹಿಸಿದ್ದಾರೆ.