alex Certify ಅಮೆರಿಕಾದ ಹಿರಿಯ ಜೀವಕ್ಕೆ 200 ಕ್ಕೂ ಅಧಿಕ ಮೊಮ್ಮಕ್ಕಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದ ಹಿರಿಯ ಜೀವಕ್ಕೆ 200 ಕ್ಕೂ ಅಧಿಕ ಮೊಮ್ಮಕ್ಕಳು

ನ್ಯೂಯಾರ್ಕ್: ಎರಡು ನೂರಕ್ಕೂ ಅಧಿಕ ಮೊಮ್ಮಕ್ಕಳನ್ನು ಹೊಂದಿದ ಅಮೆರಿಕಾದ ಅತಿ ಹಿರಿಯ ಅಜ್ಜಿಯ 116 ನೇ ಹುಟ್ಟಿದ ಹಬ್ಬವನ್ನು ಆಗಸ್ಟ್ ಮೊದಲ ವಾರದಲ್ಲಿ ಆಚರಿಸಲಾಯಿತು.

ಹೆಸ್ಟರ್ ಫೋರ್ಡ್ ಅವರು 1904 ಅಥವಾ 1905 ರಲ್ಲಿ ಜನಿಸಿದ್ದರು ಎಂಬ ಬಗ್ಗೆ ಅಮೆರಿಕಾ ಅಧಿಕಾರಿಗಳಲ್ಲಿ ಗೊಂದಲವಿದೆ. ಆದರೆ, ಅವರು ದೇಶದ ಅತಿ ಹಿರಿಯ ವ್ಯಕ್ತಿ ಎಂಬುದರಲ್ಲಿ ಯಾವುದೇ ವಿವಾದವಿಲ್ಲ ಎಂದು
ಮುಪ್ಪುಶಾಸ್ತ್ರ ಅಧ್ಯಯನ ತಂಡ ಸ್ಪಷ್ಟಪಡಿಸಿದೆ.

ಅವರು 1904 ರಲ್ಲಿ ಜನಿಸಿದ್ದರೆ ಅವರು ವಿಶ್ವದ ಮೂರನೇ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ. 1905 ರಲ್ಲಿ ಜನಿಸಿದ್ದರೆ ವಿಶ್ವದ 6 ನೇ ಅತಿ ಹಿರಿಯ ವ್ಯಕ್ತಿ ಅವರಾಗಲಿದ್ದಾರೆ.

ಉತ್ತರ ಕರೊಲಿನಾದ ಚಾರೊಲೆಟ್ ನಲ್ಲಿ ಆಯೋಜಿಸಿದ್ದ ಹಿರಿಯಜ್ಜಿಯ ಹುಟ್ಟಿದ ಹಬ್ಬ ಸಮಾರಂಭದಲ್ಲಿ ಅಕ್ಕಪಕ್ಕದವರು ಹಾಗೂ ಮನೆಯವರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಹೆಸ್ಟರ್ ತಮ್ಮ 14 ನೇ ವಯಸ್ಸಿಗೇ ಜಾನ್ ಫೋರ್ಡ್ ಅವರನ್ನು ವಿವಾಹವಾದರು. ಅವರಿಗೆ 14 ಮಕ್ಕಳಿದ್ದಾರೆ. 68 ಮೊಮ್ಮಕ್ಕಳು, 125 ಮೊಮ್ಮಕ್ಕಳು ಹಾಗೂ 120 ಮರಿ ಮಕ್ಕಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...