
ಸಾಕು ಪ್ರಾಣಿಗಳು ಮನೇಲಿದ್ರೆ ಸಾಕು ಅವರ ಚಟುವಟಿಕೆಗಳನ್ನ ನೋಡಿಯೇ ಜೀವನದ ಒತ್ತಡವನ್ನ ಮರೆಯೋಕೆ ಸಾಧ್ಯ. ಹೀಗಾಗಿ ಈ ಆಸ್ಪತ್ರೆ ಕೂಡ ಮೆಡಿಕಲ್ ಸೆಂಟರ್ ಉದ್ಯೋಗಿಗಳನ್ನ ಸ್ವಾಗತಿಸಲು ನಾಯಿಯೊಂದನ್ನ ನೇಮಕ ಮಾಡಿಕೊಂಡಿದೆ.
ಟ್ವಿಟರ್ ಬಳಕೆದಾರ ಶಾರಿ ಡನ್ ಅವೇ ಇದನ್ನು ಶೇರ್ ಮಾಡಿಕೊಂಡಿದ್ದು, ಶಿಲೋ ಎಂಬ ಮುದ್ದಾದ ನಾಯಿ ಈ ಮೆಡಿಕಲ್ ಸೆಂಟರ್ಗೆ ಆಯ್ಕೆಯಾಗಿದೆ. ಹಾಗೂ ಈ ನಾಯಿ ಆಸ್ಪತ್ರೆಯ ಐಡಿ ಕಾರ್ಡನ್ನೂ ಪಡೆದುಕೊಂಡಿದೆ. ಈ ಫೋಟೋ ನೋಡಿದ ನೆಟ್ಟಿಗರು ಮೆಡಿಕಲ್ ಸೆಂಟರ್ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.