alex Certify ಮೆಡಿಕಲ್​ ಸೆಂಟರ್​ ಸಿಬ್ಬಂದಿಯಾಗಿ ಆಯ್ಕೆಯಾದ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಡಿಕಲ್​ ಸೆಂಟರ್​ ಸಿಬ್ಬಂದಿಯಾಗಿ ಆಯ್ಕೆಯಾದ ಶ್ವಾನ….!

ಆಸ್ಪತ್ರೆಯಲ್ಲಿ ಕೆಲಸ ಮಾಡೋದು ಅಂದ್ರೆ ಸುಲಭದ ಕೆಲಸವಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಲು ಗಂಟೆಗಟ್ಟಲೆ ಕಾಲ ವ್ಯಯಿಸುವ ವೈದ್ಯರು ಹಾಗೂ ನರ್ಸ್​ಗಳು ಒತ್ತಡದ ಜೀವನವನ್ನ ನಡೆಸುತ್ತಿರುತ್ತಾರೆ. ಇಂತಹ ಒತ್ತಡವನ್ನ ಕಡಿಮೆ ಮಾಡಬೇಕು ಎಂದು ಮೆಡಿಕಲ್​ ಸೆಂಟರ್​ ಒಂದು ವಿಶೇಷ ಸಿಬ್ಬಂದಿಯೊಂದನ್ನ ನೇಮಕ ಮಾಡಿದೆ.

ಸಾಕು ಪ್ರಾಣಿಗಳು ಮನೇಲಿದ್ರೆ ಸಾಕು ಅವರ ಚಟುವಟಿಕೆಗಳನ್ನ ನೋಡಿಯೇ ಜೀವನದ ಒತ್ತಡವನ್ನ ಮರೆಯೋಕೆ ಸಾಧ್ಯ. ಹೀಗಾಗಿ ಈ ಆಸ್ಪತ್ರೆ ಕೂಡ ಮೆಡಿಕಲ್​ ಸೆಂಟರ್​ ಉದ್ಯೋಗಿಗಳನ್ನ ಸ್ವಾಗತಿಸಲು ನಾಯಿಯೊಂದನ್ನ ನೇಮಕ ಮಾಡಿಕೊಂಡಿದೆ.

ಟ್ವಿಟರ್​ ಬಳಕೆದಾರ ಶಾರಿ ಡನ್​ ಅವೇ ಇದನ್ನು ಶೇರ್‌ ಮಾಡಿಕೊಂಡಿದ್ದು, ಶಿಲೋ ಎಂಬ ಮುದ್ದಾದ ನಾಯಿ ಈ ಮೆಡಿಕಲ್​ ಸೆಂಟರ್​ಗೆ ಆಯ್ಕೆಯಾಗಿದೆ. ಹಾಗೂ ಈ ನಾಯಿ ಆಸ್ಪತ್ರೆಯ ಐಡಿ ಕಾರ್ಡನ್ನೂ ಪಡೆದುಕೊಂಡಿದೆ. ಈ ಫೋಟೋ ನೋಡಿದ ನೆಟ್ಟಿಗರು ಮೆಡಿಕಲ್​ ಸೆಂಟರ್​ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

— Shari Dunaway, MD (@ShariDunawayMD) November 20, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...