ಕೊರೊನಾದಿಂದಾಗಿ ಎಲ್ಲ ಸಮಾರಂಭಗಳೂ ಸರಳವಾಗುತ್ತಿವೆ. ಅದ್ಧೂರಿತನಕ್ಕೆ ಬ್ರೇಕ್ ಬೀಳುತ್ತಿದೆ.
ಅಮೆರಿಕದ ಟೇಲರ್ ಹಾಗೂ ಮೆಲನಿಯೆ ವೈಭವದ ವಿವಾಹ ಮಾಡಿಕೊಳ್ಳುವ ಯೋಜನೆ ರೂಪಿಸಿದ್ದರು.
ಆದರೆ, ಕೊರೊನಾದಿಂದಾಗಿ ಸಿಟಿ ಮಿಷನ್ ಸಂಸ್ಥೆ ನಡೆಸುವ ಲಾರಾ ಮನೆ ಎಂಬ ನಿರಾಶ್ರಿತ ಮಕ್ಕಳ ಮನೆಯಲ್ಲಿ ಸರಳ ರೀತಿಯಿಂದ ಮದುವೆ ಮಾಡಿಕೊಂಡರು. ಮದುವೆಗೆ ಮಾಡಬೇಕಿದ್ದ ಖರ್ಚಿನಲ್ಲಿ ಲಾರಾ ಮನೆಯ ಮಕ್ಕಳಿಗೆ ಊಟೋಪಚಾರ ನೆರವೇರಿಸುವ ಮೂಲಕ ನೂರಾರು ಜನರ ಹೃದಯ ಗೆದ್ದರು.
ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಸಿಇಒ ರಿಚರ್ಡ್ ಟ್ರಿಕಲ್, ಈ ದಿನ ಆ ದಂಪತಿಯ ಜೀವನದಲ್ಲಿಯೂ ನೆನಪಿರುತ್ತದೆ. ಲಾರಾ ಮನೆಯ ಮಕ್ಕಳಲ್ಲೂ ನೆನಪಿರುವಂಥದ್ದು ಎಂದು ಭಾವುಕರಾದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮೆಲನಿಯೆ, ಪ್ರೀತಿಯನ್ನೇಕೆ ಹಂಚಬಾರದು ? ಖುಷಿಯಾಗಿ ಇರುವವರನ್ನು ಕಂಡರೆ ನಮಗೂ ಸಂತೋಷ ಆಗುತ್ತದೆಯಲ್ಲವೇ ? ಎಲ್ಲಕ್ಕೂ ನಾವು ಬೆಲೆ ಕಟ್ಟುತ್ತೇವೆ, ದಾನ ಹಾಗಲ್ಲ ಎನ್ನುತ್ತಾ ಅವರಾಗಿಯೇ ಲಾರಾ ಮನೆಯ ಮಕ್ಕಳಿಗೆ ಊಟ ಬಡಿಸಿ ಮೆಚ್ಚುಗೆಗೆ ಪಾತ್ರರಾದರು.
https://www.facebook.com/thecitymission/photos/a.10157882066528740/10157882067328740/?type=3
https://twitter.com/richtrickel/status/1294744871677366274?ref_src=twsrc%5Etfw%7Ctwcamp%5Etweetembed%7Ctwterm%5E1294744871677366274%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fohio-couple-hosted-their-wedding-dinner-reception-with-the-homeless-in-a-local-shelter-home-win-hearts%2F641332