ಅಮೆರಿಕಾದ ಓಹಿಯೋದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಮಹಿಳೆಯೊಬ್ಬಳ ಅದೃಷ್ಟ ಬದಲಿಸಿದೆ. 22 ವರ್ಷದ ಮಹಿಳೆ ಸರ್ಕಾರದ ಲಾಟರಿ ಖರೀದಿ ಮಾಡಿದ್ದಳು. ಕೊರೊನಾ ಲಸಿಕೆ ಪ್ರಚಾರಕ್ಕೆ ಅಲ್ಲಿನ ಸರ್ಕಾರ ಲಾಟರಿ ಶುರು ಮಾಡಿದೆ. ಮೊದಲ ಡೋಸ್ ಪಡೆದ ನಂತ್ರ ಮಹಿಳೆ ಲಾಟರಿ ಖರೀದಿ ಮಾಡಿದ್ದಳಂತೆ. ಇದ್ರಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
ಈ ಲಾಟರಿಯಲ್ಲಿ ಮೊದಲ ಸ್ಥಾನ ಪಡೆದ 22 ವರ್ಷದ ಮಹಿಳೆಗೆ ಏಳುವರೆ ಕೋಟಿ ರೂಪಾಯಿ ಸಿಗಲಿದೆ ಎಂದು ಅಲ್ಲಿನ ಗವರ್ನರ್ ಹೇಳಿದ್ದಾರೆ. Abbigail Bugenske ಹೆಸರಿನ ಮಹಿಳೆ ಲಾಟರಿ ಗೆದ್ದಿದ್ದು, ಇದನ್ನು ನಂಬಲು ಸಾಧ್ಯವಾಗ್ತಿಲ್ಲವೆಂದಿದ್ದಾಳೆ. ಲಾಟರಿಯಲ್ಲಿ ಹಣ ಬರುವ ಮೊದಲು ಆಕೆ ಹಳೆ ಕಾರು ಖರೀದಿಸುವ ಪ್ಲಾನ್ ಮಾಡಿದ್ದಳಂತೆ. ಆದ್ರೆ ಈಗ ಹೊಸ ಕಾರ್ ಖರೀದಿ ಮಾಡುವ ತಯಾರಿ ನಡೆಸಿದ್ದಾಳೆ.
ಇಷ್ಟೇ ಅಲ್ಲದೆ 14 ವರ್ಷದ ಹುಡುಗನಿಗೆ ಸ್ಕಾಲರ್ ಶಿಪ್ ಸಿಕ್ಕಿದೆ. ಆತನ ವಿದ್ಯಾಭ್ಯಾಸ ಮುಗಿಯುವವರೆಗೂ ಈ ಸ್ಕಾಲರ್ ಶಿಪ್ ಆತನಿಗೆ ಸಿಗಲಿದೆ.