alex Certify ಡಾನ್ಸ್ ಮಾಡಿ ಕರೋನಾ ರೋಗಿಗಳನ್ನು ರಂಜಿಸಿದ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾನ್ಸ್ ಮಾಡಿ ಕರೋನಾ ರೋಗಿಗಳನ್ನು ರಂಜಿಸಿದ ನರ್ಸ್

ಇಂಡೋನೇಶಿಯಾ: ಕರೋನಾದಿಂದಾಗಿ ವೈದ್ಯರು ಮತ್ತು ನರ್ಸ್ ಗಳ ಅವಿರತ ಸೇವೆ ಅನನ್ಯ. ಇಲ್ಲೊಬ್ಬ ನರ್ಸ್ ಕರೋನಾ ರೋಗಿಗಳಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಅದೂ ಸಹ ಶಾರುಖ್ ಖಾನ್ ರವರ ” ಬೋಲೇ ಚುಡಿಯ ಬೋಲೇ ಕಂಗನಾ” ಹಾಡಿಗೆ. ಈ ಹಾಡು ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲೇ ಪ್ರಸಿದ್ದ.

ಸುಶಿ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ರೋಗಿಗಳು ಸಹ ನಗುತ್ತಾ , ಹಾಡು ಮತ್ತು ನೃತ್ಯವನ್ನು ಖುಷಿ ಪಡುವುದನ್ನು ಕಾಣಬಹುದು.

” ವಿಡಿಯೋವನ್ನು ನೋಡಿ ಹೃದಯ ತುಂಬಿ ಬಂತು” ಎಂಬ ಅಡಿ ಬರಹದೊಂದಿಗೆ ಶೇರ್ ಮಾಡಲಾಗಿದೆ. ಕ್ಯಾಲಿಫೋರ್ನಿಯದಲ್ಲಿಯೂ ಕಳೆದ ವಾರ ಇದೆ ರೀತಿಯ ವಿಡಿಯೋ ವೈರಲ್ ಆಗಿತ್ತು. ಐಸಿಯುನಿಂದ ಬಿಡುಗಡೆಗೊಂಡು ಮನೆಗೆ ಹೊರಟ ಕರೋನಾ ರೋಗಿಗಳನ್ನು ನೃತ್ಯದ ಮೂಲಕ ನರ್ಸ್ ಗಳು ಅಭಿನಂದಿಸಿದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...