alex Certify ಇದು ಆರಂಭವಾದ್ರೆ ಸತ್ತವರ ಜೊತೆಯೂ ನಡೆಸಬಹುದು ʼಚಾಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಆರಂಭವಾದ್ರೆ ಸತ್ತವರ ಜೊತೆಯೂ ನಡೆಸಬಹುದು ʼಚಾಟ್ʼ

ಈ ಸುದ್ದಿ ತುಂಬ ವಿಚಿತ್ರವಾಗಿದೆ. ಈ ಸುದ್ದಿ ನಂಬೋದು ಕಷ್ಟ. ಸತ್ತ ಸಂಬಂಧಿಕರು, ಸ್ನೇಹಿತರು, ಆಪ್ತರ ಜೊತೆ ನೀವು ಚಾಟ್ ಮಾಡಬಹುದು. ಯಸ್, ಈ ಬಗ್ಗೆ ನಿಮಗೆ ಸಾಕಷ್ಟು ಪ್ರಶ್ನೆ ಏಳಬಹುದು. ಎಲ್ಲದಕ್ಕೂ ಇಲ್ಲಿ ಉತ್ತರವಿದೆ.

ಟೆಕ್ ದೈತ್ಯ ಮೆಕ್ರೋಸಾಫ್ಟ್ ಇತ್ತೀಚಿಗೆ ಚಾಟ್ ಬೋಟ್ ಪೇಟೆಂಟ್ ಪಡೆದಿದೆ. ಚಾಟ್ ಬೋಟ್ ಮೂಲಕ ನೀವು ಸತ್ತ ಜನರ ಜೊತೆ ಸಂವಹನ ನಡೆಸಬಹುದೆಂದು ಕಂಪನಿ ಹೇಳಿದೆ. ಹೊಸ ಚಾಟ್ ಬೋಟ್, ಬ್ಲ್ಯಾಕ್ ಮೀರರ್ ವೆಬ್ ಸರಣಿಯಿಂದ ಪ್ರಭಾವಿತವಾಗಿದೆ ಎನ್ನಲಾಗ್ತಿದೆ. ಸರಣಿಯಲ್ಲಿ ಹುಡುಗಿ ಸತ್ತ ಬಾಯ್ ಫ್ರೆಂಡ್ ಜೊತೆ ಚಾಟ್ ಮಾಡ್ತಾಳೆ.

ಈ ಮೈಕ್ರೋಸಾಫ್ಟ್ ಚಾಟ್‌ಬೋಟ್‌ನಲ್ಲಿ ಸತ್ತವರ ಸಾಮಾಜಿಕ ಪ್ರೊಫೈಲ್‌ಗಳಿಂದ ಡೇಟಾವನ್ನು ತೆಗೆದುಕೊಳ್ಳಲಾಗುತ್ತದೆ. ಅವರ ಅಸ್ತಿತ್ವದಲ್ಲಿರುವ ಡೇಟಾದ ಆಧಾರದ ಮೇಲೆ, ಚಾಟ್‌ಬಾಟ್ ಪ್ರೋಗ್ರಾಂ ಸಿದ್ಧಪಡಿಸಲಾಗುತ್ತದೆ. ಸತ್ತವರೊಂದಿಗಿನ ಸಂಭಾಷಣೆ ಇದನ್ನು ಆಧರಿಸಿದೆ.

ಸತ್ತ ಜನರೊಂದಿಗೆ ಸಂವಹನ ನಡೆಸುವ ವಿಷಯವನ್ನು ಕೆಲವರು ಒಪ್ಪಿಕೊಳ್ಳಬಹುದು. ಆದರೆ ಈ ಹೊಸ ಚಾಟ್‌ಬೋಟ್  ಪ್ರಪಂಚದಾದ್ಯಂತ ಟೀಕೆಗೆ ಗುರಿಯಾಗ್ತಿದೆ. ಸಾಮಾಜಿಕ ಜಾಲತಾಣ ಬಳಸುತ್ತಿರುವ ಜನರು ಈ ಹೊಸ ತಂತ್ರಜ್ಞಾನವನ್ನು ಗೊಂದಲ ಎನ್ನುತ್ತಿದ್ದಾರೆ. ವರದಿಯ ಪ್ರಕಾರ, ಮೈಕ್ರೋಸಾಫ್ಟ್ ಈ ಸಮಯದಲ್ಲಿ ಈ ಹೊಸ ಚಾಟ್‌ಬಾಟ್  ಪ್ರಾರಂಭಿಸಲು ನಿರಾಕರಿಸಿದೆ ಎನ್ನಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...