alex Certify ಹಂಸದ ಮರಿಗೆ ಮರುಜನ್ಮ ಕೊಟ್ಟ ಸಹೃದಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂಸದ ಮರಿಗೆ ಮರುಜನ್ಮ ಕೊಟ್ಟ ಸಹೃದಯಿ

ತೊಂದರೆಯಲ್ಲಿ ಸಿಲುಕಿದ ಮೂಕ ಪ್ರಾಣಿಯ ರಕ್ಷಣೆಗೆ ನಿಲ್ಲುವ ಸಹೃದಯಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಲೇ ಇರುತ್ತೇವೆ. ಇಂಥ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ‘Buitengebieden’ ಹೆಸರಿನ ಡಚ್‌ ಪೇಜ್‌ ಒಂದು ಈ ವಿಡಿಯೋ ಶೇರ್‌ ಮಾಡಿಕೊಂಡಿದೆ.

ವ್ಯಕ್ತಿಯೊಬ್ಬರು ತಂತಿ ಬೇಲಿಗೆ ಸಿಲುಕಿಕೊಂಡು ಪರದಾಡುತ್ತಿರುವ ಹಂಸದ ಮರಿಯೊಂದನ್ನು ರಕ್ಷಿಸುತ್ತಿರುವ ದೃಶ್ಯಾವಳಿಯನ್ನು ಇಲ್ಲಿ ನೋಡಬಹುದಾಗಿದೆ. ಬ್ರಿಟನ್ ಮೂಲದ Wildlife Aid Foundationನ ಸಕ್ರಿಯ ಸದಸ್ಯರಾಗಿರುವ ಈ ವ್ಯಕ್ತಿ ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...