ಬರ್ಗರ್ ಅಂದ್ರೆ ಅದರಲ್ಲಿ ಬನ್, ಈರುಳ್ಳಿ, ಪಾಲಾಕ್, ಚೀಸ್, ಚಿಕನ್ ಹಿಂಗೆ ಸಾಕಷ್ಟು ಪದಾರ್ಥಗಳನ್ನ ಹಾಕಲಾಗುತ್ತೆ. ಮೆಕ್ಡಿಗೆಲ್ಲ ನೀವು ಹೋದ್ರಂತೂ ಕೇಳಿದ ಫ್ಲೇವರ್ನಲ್ಲಿ ತರಹೇವಾರಿ ಬರ್ಗರ್ಗಳ ಲಿಸ್ಟ್ನ್ನೇ ಇಟ್ಟು ಬಿಡ್ತಾರೆ. ಆದರೆ ಕೆನಡಾದಲ್ಲಿ ಬರ್ಗರ್ ಆರ್ಡರ್ ಮಾಡಿದ್ದ ಮಹಿಳೆಗೆ ಮೆಕ್ಡಿ ಅವರು 2 ಕೆಚಪ್ ಪಾಕೆಟ್ಗಳನ್ನಷ್ಟೇ ಕಳುಹಿಸಿ ಕೊಟ್ಟಿದ್ದಾರಂತೆ.
ಪತಿಯ ಜೊತೆ ಎಣ್ಣೆ ಪಾರ್ಟಿ ಮಾಡಿದ್ದ ಕಟೈ ಪೂಲೆ ಎಂಬ ಹೆಸರಿನ ಮಹಿಳೆ ಮೆಕ್ ಡಿಗೆ ಕಾಲ್ ಮಾಡಿದ್ದಾರೆ. ಬರ್ಗರ್ ಆರ್ಡರ್ ಮಾಡುವ ವೇಳೆ ಅದಕ್ಕೆ ಈರುಳ್ಳಿ, ಸಾಸ್ , ಚೀಸ್ ಹಾಕಬಾರದು ಅಂದಿದ್ದಾಳೆ. ಇಷ್ಟಕ್ಕೆ ಹೇಳಿದ್ರೆ ಮೆಕ್ ಡಿ ಏನಾದರೊಂದು ಬರ್ಗರ್ ಕಳುಹಿಸ್ತಾ ಇತ್ತೋ ಏನೋ ಆದರೆ ಈಕೆ ಬನ್ ಮತ್ತೆ ಹ್ಯಾಮ್ ಬರ್ಗರ್ ಕೂಡ ಹಾಕಬಾರದು ಅಂತಾ ಹೇಳಿದ್ದಾಳೆ.
ಈಕೆಯ ಕಂಡಿಷನ್ ಎಲ್ಲಾ ಕೇಳಿದ ಮೆಕ್ ಡಿ ಬಿಲ್ ಸಮೆತ 2 ಕೆಚಪ್ ಪ್ಯಾಕೆಟ್ಗಳನ್ನ ಕಳುಹಿಸಿಕೊಟ್ಟಿದೆ. ಈಕೆಯ ಪತಿ ಮೆಕ್ ಡಿ ಬಿಲ್ ಸಮೇತ ಎರಡು ಕೆಚಪ್ ಪ್ಯಾಕೆಟ್ಗಳ ಫೋಟೋ ಹಾಕಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. 2 ಪ್ಯಾಕೆಟ್ ಕೆಚಪ್ ಕಳುಹಿಸಿದ್ರೂ ಸಹ ಮೆಕ್ ಡೊನಾಲ್ಡ್ ಬರ್ಗರ್ ಹಣವನ್ನ ಪಾವತಿ ಮಾಡಿಸಿಕೊಂಡಿದೆ.