alex Certify ಮೂರನೇ ಬಾರಿಗೆ ಕಳ್ಳತನವಾಯ್ತು ಅದೇ ʼಪೇಂಟಿಂಗ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಬಾರಿಗೆ ಕಳ್ಳತನವಾಯ್ತು ಅದೇ ʼಪೇಂಟಿಂಗ್ʼ

ಮಗ್ ಬಿಯರ್ ಹಿಡಿದ ‘ಟು ಲಾಫಿಂಗ್ ಬಾಯ್ಸ್’ (ಇಬ್ಬರು ನಗುವ ಹುಡುಗರು) ಅತ್ಯಾಕರ್ಷಕ ಪೇಂಟಿಂಗ್ ಒಂದು ಸತತ ಮೂರನೇ ಬಾರಿಗೆ ವಸ್ತು ಸಂಗ್ರಹಾಲಯದಿಂದ ಕಳುವಾಗಿದೆ.

ಡಚ್ ನ ಪ್ರಖ್ಯಾತ ಚಿತ್ರ ಕಲಾವಿದ ಫ್ರಾನ್ಸ್ ಹಾಲ್ಸ್ ರಚಿಸಿದ ವರ್ಣ ಚಿತ್ರ ಇದಾಗಿದ್ದು, 17 ನೇ ಶತಮಾನದಲ್ಲಿ ರಚನೆಗೊಂಡಿದೆ.

ಇಬ್ಬರು ನಗುವ ಹುಡುಗರನ್ನು ಒಳಗೊಂಡ ಈ ವರ್ಣಚಿತ್ರವನ್ನು 1988 ಮತ್ತು 2011ರಲ್ಲಿ ಇದೇ ವಸ್ತು ಸಂಗ್ರಹಾಲಯದಿಂದ ಕಳುವು ಮಾಡಲಾಗಿತ್ತು. ಮೊದಲ ಬಾರಿ ಮೂರು ವರ್ಷದ ಬಳಿಕ, ಎರಡನೇ ಬಾರಿ ಆರು ತಿಂಗಳ ಬಳಿಕ ಪೊಲೀಸರು ಅದನ್ನು ಪತ್ತೆ ಮಾಡಿ ವಸ್ತು ಸಂಗ್ರಹಾಲಯಕ್ಕೆ ಒಪ್ಪಿಸಿದ್ದರು.

ಈ ಬಾರಿ ಕಳ್ಳತನವು ನಸುಕಿನ 3.30 ರ ವೇಳೆಗೆ ನಡೆದಿದೆ. ವಸ್ತು ಸಂಗ್ರಹಾಲಯದ ಅಲರಾಮ್ ಹೊಡೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ಧಾವಿಸಿ ಬಂದಿದ್ದಾರೆ, ಆದರೆ ಶಂಕಿತರನ್ನು ಕಂಡುಹಿಡಿಯಲು ವಿಫಲರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...