ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭಾರತೀಯ ಉದ್ಯಮಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಯುಕೆ ನ್ಯಾಯಾಧೀಶರು ತೀರ್ಪನ್ನ ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಾಗೂ ಭಾರತೀಯ ಜೈಲಿನ ಪರಿಸ್ಥಿತಿಯಿಂದ ಅವರ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬ ವಾದಗಳನ್ನ ತಳ್ಳಿ ಹಾಕಿದ್ದಾರೆ.
ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸೋದು ಮಾನವ ಹಕ್ಕುಗಳಿಗೆ ಪೂರಕವಾಗಿಯೇ ಇದೆ ಎಂಬುದಕ್ಕೆ ನನಗೆ ತೃಪ್ತಿ ಇದೆ ಎಂದು ಜಿಲ್ಲಾ ನ್ಯಾಯಾಧೀಶ ಸ್ಯಾಮುವಲ್ ಗೂಝೆ ಹೇಳಿದ್ದಾರೆ. ಅಲ್ಲದೇ ಈ ತೀರ್ಪಿನ ಸಂಬಂಧ ನೀರವ್ ಮೋದಿ ಮೇಲ್ಮನವಿ ಸಲ್ಲಿಸಬಹುದು ಎಂದೂ ಇದೇ ವೇಳೆ ನ್ಯಾಯಾಧೀಶರು ಮಾಹಿತಿ ನೀಡಿದ್ದಾರೆ.
ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಿದರೆ ಅವರಿಗೆ ನ್ಯಾಯ ದೊರೆಯೋದಿಲ್ಲ ಎಂಬ ವಾದಕ್ಕೆ ಯಾವುದೇ ಪುರಾವೆ ಇಲ್ಲ ಅಂತಾ ಹೇಳಿದ್ದಾರೆ.