ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಅರ್ಡರ್ನ್ ಗುರುವಾರ ತಮ್ಮ ದೇಶದ ಆಕ್ಲೆಂಡ್ ನಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ಸಂಭ್ರಮಿಸಿದರು. ಈ ವೇಳೆ ಅವರು ಉತ್ತರ ಭಾರತೀಯ ಫೇಮಸ್ ಖಾದ್ಯ ಪೂರಿ, ಚೋಲೆ, ದಾಲ್ ತಿಂದು ಖುಷಿಪಟ್ಟರು.
ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋ ವೈರಲ್ ಆಗಿದೆ. ಪ್ರಧಾನಿ ತಮ್ಮ ಕಾರಿನಿಂದ ಇಳಿದು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ದೇವಾಲಯ ಆವರಣ ಪ್ರವೇಶಿಸುವ ಮೊದಲು ತಮ್ಮ ಪಾದರಕ್ಷೆಯನ್ನು ತೆಗೆಯುತ್ತಾರೆ, ಬಳಿಕ ಅಲ್ಲಿದ್ದವರಿಗೆ ನಮಸ್ಕಾರ ಮಾಡಿ ಒಳಗೆ ತೆರಳುತ್ತಾರೆ.
ನಂತರ ಅಲ್ಲಿದ್ದ ಪಂಡಿತರು ಸಂಸ್ಕೃತ ಶ್ಲೋಕ ಪಠಿಸಿ ದೇವರಿಗೆ ಪೂಜೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಜೆಸಿಂದಾ ಕೈಮುಗಿದು ನಿಂತಿರುತ್ತಾರೆ. ಈ ವೇಳೆ ಅರ್ಚಕರು ಆಕೆಗೆ ಶಾಲು ಹೊದಿಸಿ ಆಶೀರ್ವದಿಸಿದ್ದಾರೆ. ಪರ್ಯಾಯವಾಗಿ ಆಕೆ ನಮಸ್ಕರಿಸುವುದನ್ನು ಕಾಣಬಹುದಾಗಿದೆ. ಈ ಸಂದರ್ಭದಲ್ಲಿ ಅವರು ಭಾರತದ ತಿನಿಸುಗಳನ್ನು ಸವಿದು ಶ್ಲಾಘಿಸಿದರು.
https://twitter.com/VickyAgarwalaVA/status/1291776275921551367?ref_src=twsrc%5Etfw%7Ctwcamp%5Etweetembed%7Ctwterm%5E1291776275921551367%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fnew-zealand-pm-jacinda-ardern-eats-chhole-puri-at-radha-krishna-temple-people-laud-her-for-merging-in-ambience%2F633999