
ಬೆಳಕಿನ ಹಬ್ಬದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ವೈರಲ್ ಆಗಿವೆ. ಇದರಲ್ಲಿ ನ್ಯೂಜಿಲೆಂಡ್ ಪೊಲೀಸ್ ಅಧಿಕಾರಿಗಳ ವಿಶೇಷ ನೃತ್ಯ ಮುಂಚೂಣಿಯಲ್ಲಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ನ್ಯೂಜಿಲೆಂಡ್ ಪೊಲೀಸ್ ಅಧಿಕಾರಿಗಳು ಬಾಲಿವುಡ್ನ ಕಾಲಾ ಚಶ್ಮಾ ಹಾಗೂ ಲಡ್ಕಿ ಕರ್ ಗಯಿ ಚುಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ . ಸಮವಸ್ತ್ರ ಧರಿಸಿಯೇ ಹಿಂದಿ ಸಿನಿಮಾದ ಹಾಡಿಗೆ ನ್ಯೂಜಿಲೆಂಡ್ ಪೊಲೀಸರು ಡ್ಯಾನ್ಸ್ ಮಾಡ್ತಿರೋ ವಿಡಿಯೋ ಟ್ವಿಟರ್ನಲ್ಲಿ ಟ್ರೆಂಡ್ ಕಿಯೇಟ್ ಮಾಡಿದೆ.